Job Description: * ಇತ್ತೀಚಿಗೆ ಉತ್ತರಾಖಂಡ ರಾಜ್ಯದ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ ಹಿನ್ನಲೆಯಿಂದಾಗಿ, ಪ್ರಸ್ತುತ ಉತ್ತರಾಖಂಡ ರಾಜ್ಯದ 9ನೇ ಮುಖ್ಯಮಂತ್ರಿಯಾಗಿ ತೀರಥ್ ಸಿಂಗ್ ರಾವತ್'ಅವರು ಪ್ರಮಾಣವಚನ ಸ್ವೀಕಾರ ಮಾಡಿದರು. * ಪ್ರಸ್ತುತ ಉತ್ತರಾಖಂಡ ರಾಜ್ಯವು 2000ನೇ ಇಸವಿಯಲ್ಲಿ ರಚನೆಯಾಗಿದ್ದು, ಉತ್ತರಾಖಂಡ್ ರಾಜ್ಯದ ಮೊದಲ ಶಿಕ್ಷಣ ಸಚಿವರಾಗಿ, ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಉತ್ತರ ಪ್ರದೇಶ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಜೊತೆಗೆ ಉತ್ತರಾಖಂಡ್ ಬಿಜೆಪಿ ಅಧ್ಯಕ್ಷರಾಗಿ ತೀರಥ್ ಸಿಂಗ್ ರಾವತ್'ರವರು ಕಾರ್ಯ ನಿರ್ವಹಿಸಿದ್ದರು. * ತೀರಥ್ ಸಿಂಗ್ ರಾವತ್'ರವರು ಉತ್ತರಾಖಂಡ ರಾಜ್ಯ ರಚನೆ ಆದಾಗಿನಿಂದ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗಿ ಮುಂದೆ ಸಾಗುತ್ತಿದ್ದು, ಈ ಮೊದಲು 1997ರಲ್ಲಿ ಉತ್ತರ ಪ್ರದೇಶ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ತೀರಥ್ ಸಿಂಗ್ ರಾವತ್ ರವರ ಬಗ್ಗೆ : * ತಿರಥ್ ಸಿಂಗ್ ರಾವತ್ ರವರು 9 ಏಪ್ರಿಲ್ 1964 ಜನಿಸಿದರು. ಇವರು ಭಾರತೀಯ ಜನತಾ ಪಕ್ಷದ ಪ್ರಮುಖ ರಾಜಕಾರಣಿಯಾಗಿದ್ದಾರೆ. * ಉತ್ತರಾಖಂಡದ ಭಾರತೀಯ ಜನತಾ ಪಕ್ಷದ ಮುಖ್ಯಸ್ಥರಾಗಿದ್ದರು ಮತ್ತು ಉತ್ತರಾಖಂಡ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದರು. * ಪ್ರಸ್ತುತ ತಿರಥ್ ಸಿಂಗ್ ರಾವತ್ ರವರು 2021 ರ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಕಾರ್ಯ ನಿವರ್ಹಿಸುತಿದ್ದಾರೆ.