Job Description: * ಭಾರತ ದೇಶದಲ್ಲಿ ಜಿಎಸ್ಟಿ(GST) ಅಕ್ರಮದ ವಿಚಾರ ಈ 4 ರಾಜ್ಯಗಳಲ್ಲಿ ಕಂಡು ಬಂದಿರುವುದಾಗಿ ವರದಿಯಾಗಿದೆ. * ಕೇಂದ್ರ ವಿತ್ತ ಸಚಿವಾಲಯ ಸಂಸತ್ತಿಗೆ ನೀಡಿರುವ ವರದಿ ಪ್ರಕಾರ 2017-18 ರಿಂದ 2020-21ರ ನಡುವೆ ದೆಹಲಿಯಲ್ಲಿ 3,295 ಅಕ್ರಮ ಪ್ರಕರಣಗಳು, ತಮಿಳುನಾಡಿನಲ್ಲಿ 3,220 ಅಕ್ರಮ ಪ್ರಕರಣಗಳು, ಹಾಗೂ ಮಹಾರಾಷ್ಟ್ರ 3,195 ಅಕ್ರಮ ಪ್ರಕರಣಗಳು ಜೊತೆಗೆ 4 ನೇ ಸ್ಥಾನದಲ್ಲಿ ಗುಜರಾತ್ ರಾಜ್ಯದಲ್ಲಿ 2,848 ಹಗರಣ ನಡೆದಿವೆ ಎಂದು ತಿಳಿಸಲಾಗಿದೆ. * ರಾಜ್ಯ ವಾಣಿಜ್ಯ ತೆರಿಗೆ ಆಯುಕ್ತ ಜೆ.ಪಿ ಗುಪ್ತಾ ನೀಡಿರುವ ಮಾಹಿತಿಯ ಪ್ರಕಾರ ಬಹಳಷ್ಟು ಜನರು GSTಯನ್ನು ನಕಲಿ ನೋಂದಣಿ ಮಾಡಿಸಿಕೊಂಡಿದ್ದಾರೆ, ಹಾಗೂ ಅನೇಕರು ಜಿಎಸ್ಟಿ ನೋಂದಣಿಗಳನ್ನು ಬಳಸಿಕೊಂಡು ಅಕ್ರಮವಾಗಿ ಇನ್ಪುಟ್ ಕ್ರೆಡಿಟ್ಗಳನ್ನು ಕ್ಲೇಂ (Cliam) ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ದೇಶದಲ್ಲಿ GST ಬಗ್ಗೆ ಮಾಹಿತಿ : * ಜಿಎಸ್ ಟಿ ಅಂದರೆ ಸರಕು ಮತ್ತು ಸೇವಾ ತೆರಿಗೆ (Goods and Services Tax) * ಭಾರತದ ತೆರಿಗೆ ವ್ಯವಸ್ಥೆಯು ದಿ.1 ಜುಲೈ, 2017 ಮಧ್ಯರಾತ್ರಿಯಿಂದಲೇ ದೇಶದಾದ್ಯಂತ ಜಾರಿಗೆ ಬಂದಿದೆ. * ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಮಧ್ಯರಾತ್ರಿ 12 ಗಂಟೆಗೆ ಅವರು ಗುಂಡಿ ಒತ್ತುವ ಮೂಲಕ ಹೊಸ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು.