Job Description: * ಭಾರತೀಯ ಸೇನೆಯು ತನ್ನ ಸೇನಾ ಸಾಮರ್ಥ್ಯ ಬಲಪಡಿಸಿಕೊಳ್ಳಲು ಸರಿ ಸುಮಾರು 22 ಸಾವಿರ ಕೋಟಿ ಮೌಲ್ಯದ 30 ಶಸ್ತ್ರಸಜ್ಜಿತ ಡ್ರೋನ್ ಗಳನ್ನು ಖರೀದಿಸಲು ಅಮೆರಿಕದೊಂದಿಗೆ ಭಾರತವು ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. * ಈ ಒಪ್ಪಂದದ ಯೋಜನೆಯ ಮೂಲಕ ಭಾರತದ ಸೇನೆಗಳಿಗೆ MQ-9 ರೀಪರ್ ಡ್ರೋನ್ ಗಳನ್ನು ಖರೀದಿಮಾಡಲಾಗುವದು ಎಂದು ಭಾರತ ಸರ್ಕಾರ ತಿಳಿಸಿದೆ. * ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಈ ಶಸ್ತ್ರಸಜ್ಜಿತ ಡ್ರೋನ್ ಗಳ ಖರೀದಿಗೆ ಅನುಮೋದನೆ ನೀಡುವ ಕುರಿತು ತಿಳಿದು ಬಂದಿದೆ. * ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್'ರವರು ಇದೆ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಿ ಒಪ್ಪಂದಕ್ಕೆ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ. * ಅಮೇರಿಕದ ಸ್ಯಾನ್ ಡಿಯಾಗೊ ಮೂಲದ ಜನರಲ್ ಅಟಾಮಿಕ್ಸ್ ಕಂಪನಿಯು ಈ MQ-9B ಪರಭಕ್ಷಕ ಡ್ರೋನ್'ಗಳನ್ನು ತಯಾರಿಸಲಾಗಿದೆ. MQ-9 ಡ್ರೋನ್'ಗಳ ಮಾಹಿತಿ: * ಇವುಗಳು ಗಾಳಿಯಿಂದ-ನೆಲದವರೆಗೆ ಕ್ಷಿಪಣಿಗಳ ಜೊತೆಗೆ ಸೆನ್ಸರ್ ಗಳು ಮತ್ತು ಲೇಸರ್-ಗೈಡೆಡ್ ಬಾಂಬ್ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿವೆ. * ಈ ಹಿಂದೆ ಭಾರತೀಯ ನೌಕಾಪಡೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಲು ಎರಡು ಶಸ್ತ್ರರಹಿತ MQ-9B C-ಗಾರ್ಡಿಯನ್ ಡ್ರೋನ್ ಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆಗೆ ಪಡೆಯಲಾಗಿತ್ತು, ಮತ್ತು ಈ ಡ್ರೋನ್'ಗಳ ಅವಧಿಯನ್ನು ವಿಸ್ತರಿಸಲು ತಿಳಿಸಲಾಗಿದೆ. ಭಾರತೀಯ ನೌಕಾಪಡೆ ಬಗ್ಗೆ ಮಾಹಿತಿ : * ಭಾರತೀಯ ನೌಕಾಪಡೆ 1 ಏಪ್ರಿಲ್ 1895 ಸ್ಥಾಪನೆಯಾಗಿದೆ * ಭಾರತೀಯ ನೌಕಾಪಡೆ ಇದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಡೆಯಾಗಿದೆ. * ಭಾರತೀಯ ನೌಕಾಪಡೆಯಲ್ಲಿ ಸುಮಾರು 55,000 ಜನರು ಕಾರ್ಯನಿರತರಾಗಿದ್ದಾರೆ ಮತ್ತು ಇವರಲ್ಲಿ ಸುಮಾರು 5000 ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು 2000 ಜನ ನೌಕಾ ಕಮಾಂಡೋಗಳಾಗಿದ್ದಾರೆ. * ಭಾರತೀಯ ನೌಕಾಪಡೆ 155 ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊಂದಿದೆ. * ಭಾರತದ ರಾಷ್ಟ್ರಪತಿಗಳು ಭಾರತೀಯ ಸೇನೆಯ ಸರ್ವೋಚ್ಚ ಕಮಾಂಡರ್, ಮತ್ತು ಅದರ ವೃತ್ತಿಪರ ಮುಖ್ಯಸ್ಥರು ನಾಲ್ಕು-ಸ್ಟಾರ್ ಜನರಲ್ ಸೇನಾ ಮುಖ್ಯಸ್ಥರಾಗಿದ್ದಾರೆ.