Job Description: * ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ICC) ಈ ಹಿಂದೆ ಹೇಳಿದಂತೆ ಪ್ರತಿ ತಿಂಗಳು ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ ಅವರಿಗೆ 'ಐಸಿಸಿ ತಿಂಗಳ ಆಟಗಾರ' ಪ್ರಶಸ್ತಿಯನ್ನು ನೀಡುತ್ತದೆ. * ICC ನೀಡುವ ತಿಂಗಳ ಆಟಗಾರ ಪ್ರಶಸ್ತಿಯನ್ನು, ಈ ಬಾರಿಯ ಅಂದರೆ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಭಾರತ ತಂಡದ ಬೌಲರ್ (ಆಫ್ ಸ್ಪಿನ್ನರ್) ಆರ್ ಅಶ್ವಿನ್ ಅವರಿಗೆ ಲಭಿಸಿದೆ. * ICCಯ ಜನೇವರಿ ತಿಂಗಳ ಆಟಗಾರ ಪ್ರಶಸ್ತಿಯನ್ನು ರಿಷಿಬ್ ಪಂತ ಪಡೆದುಕೊಂಡಿದ್ದರು. * ಈ ತಿಂಗಳ ಆಟಗಾರ ಪ್ರಶಸ್ತಿಗೆ ಇಂಗ್ಲೆಂಡ್ ನಾಯಕ ಜೋ ರೂಟ್ ಹಾಗೂ ವೆಸ್ಟ್ ಇಂಡೀಸ್ ತಂಡದ ಕೈಲ್ ಮೇಯರ್ಸ್, ಮತ್ತು ಭಾರತ ತಂಡದ ಆರ್ ಅಶ್ವಿನ್'ರವರ ಹೆಸರುಗಳನ್ನೂ ಐಸಿಸಿ ನಾಮ ನಿರ್ದೇಶನ ಮಾಡಿತ್ತು, ಇದೀಗ ಅಂತಿಮವಾಗಿ ಈ ಪ್ರಶಸ್ತಿ ಭಾರತ ತಂಡದ ಆರ್ ಅಶ್ವಿನ್'ರವರಿಗೆ ಪ್ರಶಸ್ತಿ ಲಭಿಸಿದೆ. * ಮಹಿಳಾ ವಿಭಾಗದ ಆಟಗಾರಲ್ಲಿ ಇಂಗ್ಲೆಂಡ್ನ ಟಮ್ಮಿ ಬ್ಯೂಮಾಂಟ್ ಅವರಿಗೆ ಫೆಬ್ರವರಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿ ಲಭಿಸಿದೆ. ಆರ್ ಅಶ್ವಿನ್ ಫೆಬ್ರುವರಿ ತಿಂಗಳ ಪ್ರಶಸ್ತಿ ಪಡೆಯಲು ಕಾರಣ: * ಭಾರತ ಮತ್ತು ಇಂಗ್ಲೆಂಡ್ ದೇಶಗಳ ಮಧ್ಯ ನಡೆದ ಟೆಸ್ಟ್ ಪಂದ್ಯಗಳಲ್ಲಿ ಆರ್ ಅಶ್ವಿನ್'ರವರು ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ 5 ವಿಕೆಟ್ ಪಡೆದರು, ಒಟ್ಟಾರೆ 24 ವಿಕೆಟ್ಗಳನ್ನು ಗಳಿಸಿದ್ದರು. ಈ ಟೆಸ್ಟ್ ಹಣಾಹಣಿಯಲ್ಲಿ ಆರ್ ಅಶ್ವಿನ್'ರವರು ತಮ್ಮ ವೃತ್ತಿ ಜೀವನದ ಐದನೇ ಟೆಸ್ಟ್ ಶತಕ ಬಾರಿಸಿ ಭಾರತ ತಂಡ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. * ಆರ್ ಅಶ್ವಿನ್'ರವರು ಟೆಸ್ಟ್ ನಲ್ಲಿ 400 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.