Job Description: * ಚೀನಾ ದೇಶವು ಈ ವರ್ಷ ಜುಲೈ ತಿಂಗಳಲ್ಲಿ ಅರುಣಾಚಲ ಪ್ರದೇಶದ ಗಡಿ ಸಮೀಪವಿರುವ ಟಿಬೆಟ್ಗೆ ಬುಲೆಟ್ ರೈಲು ಪ್ರಾರಂಭಿಸಲಿದೆ ಎಂದು ಹಿರಿಯ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ. * ಚೀನಾ ಸ್ಟೇಟ್ ರೈಲ್ವೆ ಗ್ರೂಪ್ ಕಂಪನಿ ಲಿಮಿಟೆಡ್'ನ ಅಧ್ಯಕ್ಷ 'ಲು ಡುಂಗ್ಫು' ನೀಡಿದ ಮಾಹಿತಿ ಪ್ರಕಾರ ಈ ರೈಲು ಇಂಧನ ಮತ್ತು ವಿದ್ಯುತ್ ಚಾಲಿತ ರೈಲು ಆಗಿದೆ, ಪ್ರಸ್ತುತ ಇದು ಲಾಸಾಗೆ 435 ಕಿ.ಮೀ ದೂರದವರೆಗೆ ಸಂಪರ್ಕ ಕಲ್ಪಿಸುವ ಹೈ ಸ್ಪೀಡ್ ರೈಲ ಆಗಿದೆ. * 2014ರಲ್ಲಿ ಲಾಸಾ ಮತ್ತು ನೈಂಗ್ಚಿಯೊಗೆ ಪ್ರದೇಶಗಳಿಗೆ ರೈಲ್ವೆ ಹಳಿ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಾರಂಭಗೊಂಡಿತ್ತು, ಈ ಮಾರ್ಗದಲ್ಲಿ ಚಲಿಸುವ ಬುಲೆಟ್ ರೈಲು ಪ್ರತಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. * ಚೀನಾ ರಾಷ್ಟ್ರವು 2025ರ ವೇಳೆಗೆ 50,000 ಕಿ.ಮೀ ಉದ್ದದ ಹೈ ಸ್ಪೀಡ್ ರೈಲ್ವೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ. * ಟಿಬೆಟ್ನ ಮೊದಲ ವಿದ್ಯುತ್ ಚಾಲಿತ ರೈಲು ಮಾರ್ಗ ಎಂದು ಟಿಬೆಟ್ನ ರೈಲ್ವೆ ನಿರ್ಮಾಣ ಸಂಸ್ಥೆ ಮಾಹಿತಿಯನ್ನು ನೀಡಿದೆ.