Job Description: * ರಾಜ್ಯದ ವಿವಿಧ ನದಿಗಳಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ವ್ಯರ್ಥ ನೀರು ಬಳಕೆಗೆ ಒತ್ತು- 3986ಕೋಟಿ.ರೂ.ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು ಕಟ್ಟುವ ಯೋಜನೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. * ಮಹದಾಯಿ ಯೋಜನೆಗೆ ನ್ಯಾಯಾಧಿಕರಣದ ತೀರ್ಪಿನಂತೆ ಕಳಸಾ-ಬಂಡೂರಿ ಯೋಜನೆಗಳಿಗೆ 1,677 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವದು ಎಂದು ತಿಳಿಸಿದ್ದಾರೆ. * ಭದ್ರಾ ಮೇಲ್ದಂಡೆ ಯೋಜನೆಗೆ 21,474 ಕೋಟಿ ರೂ. * ಉತ್ತರ ಕರ್ನಾಟಕದ ಕೃಷ್ಣಾ ಮೇಲ್ಡಂಡೆ ಯೋಜನೆ 3ನೇ ಹಂತದ ಯೋಜನೆ ಅನುಷ್ಠಾನ ಗೊಳಿಸಲು 5,600 ಕೋಟಿ ರೂ. ಮೀಸಲಿಡಲಾಗುವುದು ಎಂದು ಮಾಹಿತಿಯನ್ನು ನೀಡಿದ್ದಾರೆ. * ಆತ್ಮನಿರ್ಭರಕ್ಕೆ ಉತ್ತೇಜನ ನೀಡಲು ರಾಮನಗರದಲ್ಲಿ ಹೈಟೆಕ್ ಸಿಲ್ಕ್ ಮಾರುಕಟ್ಟೆ, ಹಾಗೂ ವಿಜಯಪುರದ ಇಟ್ಟಂಗಿಹಾಳದಲ್ಲಿ ಆತ್ಮನಿರ್ಭರ ಭಾರತ ಅಭಿಯಾನದಡಿ ಆಹಾರ ಪಾರ್ಕ್ ಸ್ಥಾಪಿಸಲು ಮುಂದಾಗಿದೆ. * ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು 100 ಕೋಟಿ ರೂ.ಗಳನ್ನು ಸರ್ಕಾರ ಘೋಷಣೆ ಮಾಡಿದೆ. * APMCಗಳಲ್ಲಿನ ಮಹಿಳೆಯರ ಸಬಲೀಕರಣಕ್ಕೆ ಶೇ. 10 ಮೀಸಲಾತಿ ನೀಡಲಾಗುವದು, ಮತ್ತು ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಇದ್ದ ಸೀಟುಗಳ ಮೀಸಲಾತಿಯನ್ನು ಶೇ. 50ಕ್ಕೆ ಹೆಚ್ಚಿಸಲಾಗುವದು. * ಉಡುಪಿಯಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರ ಸ್ಮರಣೆಯಲ್ಲಿ 'ಪೇಜಾವರ ಸ್ಮೃತಿವನ ನಿರ್ಮಿಸಲು 2ಕೋಟಿ ರೂ.ವನ್ನು ಬಜೆಟ್ನಲ್ಲಿ ಘೋಷಿಸಿದ್ದಾರೆ. * ಆಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ ಮಾಡಲು 10 ಕೋಟಿ ರು ಅನುದಾನ ನೀಡಲಾಗುತ್ತಿದೆ ಬಜೆಟ್'ನಲ್ಲಿ ತಿಳಿಸಿದ್ದಾರೆ. * ಆಗಸ್ಟ್ 2021ರೊಳಗೆ ಒಂದು ರಾಷ್ಟ್ರ ಒಂದು ಕಾರ್ಡ್ ವ್ಯವಸ್ಥೆ ಜಾರಿಗೆ, ಇದನ್ನು ನಮ್ಮ ಮೆಟ್ರೋ ಹಾಗೂ BMTC ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಈ ಕಾರ್ಡ್ ಬಳಕೆಗೆ ಅವಕಾಶ ನೀಡಲಾಗುವದು ಎಂದು ತಿಳಿಸಿದ್ದಾರೆ. * ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ 'ವನಿತಾ ಸಂಗಾತಿ' ಯೋಜನೆ ಜಾರಿ. * ರಾಜ್ಯದಲ್ಲಿ ಕೊರೊನಾ ನಿರ್ವಹಣೆಗೆ ಇದುವರೆಗೂ 5372 ಕೋಟಿ ರೂ. ವೆಚ್ಚ ಮಾಡಲಾಗಿದೆ. * ಬಸವಕಲ್ಯಾಣದಲ್ಲಿ 500 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲು ಅನುಮೋದನೆ. * ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಈಗಾಗಲೇ ಅಸ್ತಿತ್ವದಲ್ಲಿರುವ 6 ತಿಂಗಳ ಹೆರಿಗೆ ರಜೆಯೊಂದಿಗೆ 6ತಿಂಗಳು ಮಕ್ಕಳ ಆರೈಕೆ ರಜೆ ನೀಡಲಾಗುವುದು ಎಂದು ತಿಳಿಸಿದ್ದಾರೆ. - 2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಯಾವ ವಲಯಕ್ಕೆ ಎಷ್ಟು ಅನುದಾನ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ; 31,028 ಕೋಟಿ ರೂ. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ : 62,150 ಕೋಟಿ ರೂ. ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ : 52,529 ಕೋಟಿ ರೂ. ಬೆಂಗಳೂರು ಸಮಗ್ರ ಅಭಿವೃದ್ಧಿ : 7795 ಕೋಟಿ ರೂ. ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ : 2645 ಕೋಟಿ ರೂ. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ : 52,519 ಕೋಟಿ ರೂ. ಶಿಕ್ಷಣ ವಲಯ : 29,688 ಕೋಟಿ ಅನುದಾನ ನಗರಾಭಿವೃದ್ಧಿ ಕ್ಷೇತ್ರ : 27,386 ಕೋಟಿ ಅನುದಾನ ಜಲ ಸಂಪನ್ಮೂಲ ಕ್ಷೇತ್ರ : 21,181 ಕೋಟಿ ಹಣ ಇಂಧನ ಇಲಾಖೆ : 16,515 ಕೋಟಿ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ : 16,036 ಕೋಟಿ ಕಂದಾಯ ಇಲಾಖೆ ವ್ಯಾಪ್ತಿ : 12,384 ಕೋಟಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ : 11,908 ಕೋಟಿ ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರ : 10,330 ಕೋಟಿ ಲೋಕೋಪಯೋಗಿ ಇಲಾಖೆ : 10,256 ಕೋಟಿ ಸಮಾಜ ಕಲ್ಯಾಣ ಇಲಾಖೆ : 8,864 ಕೋಟಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ : 7,297 ಕೋಟಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ : 4,531 ಕೋಟಿ ವಸತಿ ಇಲಾಖೆ ಯೋಜನೆ : 2,990 ಕೋಟಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ : 2,374 ಕೋಟಿ ಇತರೆ ಇಲಾಖೆಗಳ ಯೋಜನೆ : 94,416 ಕೋಟಿ