Job Description: * ಭಾರತದ ಅತ್ಯಂತ ದೊಡ್ಡ ಕಿಡ್ನಿ ಡಯಾಲಿಸಿಸ್ ಸೌಲಭ್ಯವನ್ನು ದಿಲ್ಲಿಯ ಗುರುದ್ವಾರ ಬಾಂಗ್ಲಾ ಸಾಹಿಬ್ ಸಂಕೀರ್ಣದಲ್ಲಿ ಲೋಕಾರ್ಪಣೆ ಮಾಡಲಾಯಿತು. * ಗುರು ಹರಿಕೃಷ್ಣ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ರಿಸರ್ಚ್ ಕಿಡ್ನಿ ಡಯಾಲಿಸಿಸ್ ಹಾಸ್ಪಿಟಲ್ ನಲ್ಲಿ ಉದ್ಘಾಟನೆ ಮಾಡಲಾಯಿತು. * ಒಂದೇ ಸಮಯಕ್ಕೆ 101 ರೋಗಿಗಳಂತೆ ಹಾಗೂ ಪ್ರತಿದಿನ 500 ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಒದಗಿಸಲಿದೆ ಎಂದು ತಿಳಿಸಿದ್ದಾರೆ. * ಈ ಆಸ್ಪತ್ರೆಯಲ್ಲಿ ಎಲ್ಲ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. ಯಾವುದೇ ಬಿಲ್ಲಿಂಗ್ ಅಥವಾ ಪಾವತಿ ಕೌಂಟರ್ ಇಲ್ಲ, ಎಂದು ಡಿಎಸ್ ಜಿಎಂಸಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಮಾಹಿತಿಯನ್ನು ನೀಡಿದ್ದಾರೆ.