Job Description: * ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಮನಸುಖ್ ಮಾಂಡವೀಯವರು ಪೂರ್ಣ ಮಹಿಳಾ ಸಿಬ್ಬಂದಿಗಳೇ ಕಾರ್ಯಾಚರಣೆ ನಡೆಸುವ, ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾದ ಎಂಟಿ ಸ್ವರ್ಣ ಕೃಷ್ಣಾ ಹಡಗುಯಾನಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆಯನ್ನು ನೀಡಿದ್ದಾರೆ. * ವಿಶ್ವದ ಮೊದಲ ಮಹಿಳಾ ಸಿಬ್ಬಂದಿಯೇ ನೌಕಾಯಾನದ ಸಾರಥ್ಯ ವಹಿಸಿರುವ ಕಾರ್ಯಾಚರಣೆ ಇದಾಗಿದೆ ಎಂದು ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವಾಲಯ ಮಾಹಿತಿಯನ್ನು ನೀಡಿದೆ. * ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಮಹಿಳಾ ದಿನವನ್ನೂ ಆಚರಿಸುವ ಸಲುವಾಗಿ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಮಾಹಿತಿಯನ್ನು ನೀಡಿದೆ.