Job Description: * ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋ ಇದೆ ಮಾರ್ಚ್.28 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಐಸ್ಯಾಟ್-1 ಉಪಗ್ರಹವನ್ನು ಉಡಾಯಿಸುತ್ತಿದೆ. * ಈ ಉಪಗ್ರಹದಿಂದ ದೇಶದ ಗಡಿಯಲ್ಲಿನ ಪ್ರದೇಶಗಳ ಮೇಲೆ ಕಣ್ಗಾವಲು ಇಡಲಾಗುವದು ಮತ್ತು ನೈಸರ್ಗಿಕ ವಿಕೋಪಗಳಂತ ಸಂದರ್ಭದಲ್ಲೂ ಮುನ್ಸೂಚನೆ ನೀಡಲು ಸಹಾಯವಾಗಲಿದೆ. ಗೇಮ್ ಚೇಂಜರ್ ಉಪಗ್ರಹ: * ಇಸ್ರೋದ ಈ ಜಿಐಸ್ಯಾಟ್-1 ಉಪಗ್ರಹ ಇದು ಹೈ ರೆಸಲ್ಯೂಶನ್ ಕೆಮರಾಗಳನ್ನು ಹೊಂದಿದೆ, ಹಾಗೂ ದೇಶದ ಮೂಲೆ ಮೂಲೆಯಲ್ಲಿ ಕಣ್ಣಿಡಲು, ಜೊತೆಗೆ ಇದು ನೈಸರ್ಗಿಕ ವಿಕೋಪಗಳ ಮುನ್ಸೂಚನೆ ನೀಡಲು ಅನುಕೂಲವಾಗಲಿದೆ ಎಂದು ಇಸ್ರೋ ಮೂಲಗಳು ಮಾಹಿತಿಯನ್ನು ನೀಡಿವೆ. ಗೇಮ್ ಚೇಂಜರ್ ಉಪಗ್ರಹ ಉಡಾವಣೆಯ ಮಾಹಿತಿ: ಈ ಗೇಮ್ ಚೇಂಜರ್ ಉಪಗ್ರಹವು ಇದೆ ಮಾರ್ಚ್.28ರಂದು ಭೂ ಮೇಲ್ಮೆಯಿಂದ 36 ಸಾವಿರ ಕಿ.ಮೀ. ದೂರದ ಕಕ್ಷೆಗೆ ಇಸ್ರೋ ಈ ಉಪಗ್ರಹವನ್ನು ಉಡಾವಣೆ ಮಾಡಲಿದೆ.