Job Description: * ಇತ್ತೀಚಿಗೆ ದೇಶದ ಅತ್ಯಂತ ಕಲುಷಿತ ನಗರಗಳ ಪಟ್ಟಿಯನ್ನು ಕೇಂದ್ರ ಪರಿಸರ ಸಚಿವಾಲಯ ಬಿಡುಗಡೆ ಮಾಡಿದೆ. ದೇಶದಲ್ಲಿನ ಅತಿ ಹೆಚ್ಚು ಕಲುಷಿತ ನಗರಗಳು: * ಉತ್ತರ ಪ್ರದೇಶ(UP), ಒಡಿಶಾ, ರಾಷ್ಟ್ರ ರಾಜ್ಯಧಾನಿ ದೆಹಲಿ ಈ ಪ್ರದೇಶಗಳಲ್ಲಿ ಭೂಮಿ, ಕುಡಿಯುವ ನೀರು, ಗಾಳಿ ಮಲಿನವಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ. * ದೇಶದ 112 ಪ್ರದೇಶಗಳನ್ನು ಅತ್ಯಂತ ಕಲುಷಿತ ಪ್ರದೇಶಗಳೆಂದು ಗುರುತಿಸಲಾಗಿದೆ, ಇವುಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸೇರಿವೆ. * ಪ್ರಸ್ತುತ ಒಡಿಶಾ ರಾಜ್ಯವು 23 ಕಲುಷಿತ ಪ್ರದೇಶಗಳನ್ನು ಹೊಂದಿ, ಮೊದಲನೆಯ ಸ್ಥಾನದಲ್ಲಿದೆ. * ಉತ್ತರ ಪ್ರದೇಶ ರಾಜ್ಯವು 21 ಕಲುಷಿತ ಪ್ರದೇಶ ಹೊಂದಿ, ಎರಡನೇ ಸ್ಥಾನದಲ್ಲಿದೆ. * ರಾಷ್ಟ್ರ ರಾಜ್ಯಧಾನಿ ದೆಹಲಿ 11 ಕಲುಷಿತ ಪ್ರದೇಶಗಳನ್ನೂ ಹೊಂದಿ ಮೂರನೇ ಸ್ಥಾನದಲ್ಲಿದೆ.