Job Description: * ಈಕ್ವೆಟೋರಿಯಲ್ ಗಿನಿಯಲ್ಲಿ ಸೇನಾ ಬ್ಯಾರಕ್ ನಲ್ಲಿ ಸ್ಫೋಟ ಸಂಭವಿಸಿದ ಈ ಹಿನ್ನಲೆಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ, 600ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. * ಬಾಟಾದ ಮೊಂಡೊಂಗ್ ನ್ಕುವಾಂಟೋಮಾದ ಸುತ್ತಮುತ್ತಲಿನ ಮಿಲಿಟರಿ ಬ್ಯಾರಕ್ ಗಳಲ್ಲಿ ಡೈನಮೈಟ್ ನಿರ್ವಹಣೆಯನ್ನು ನಿರ್ಲಕ್ಷ್ಯ ಮಾಡಿರುವ ಕಾರಣಗಳಿಂದ ಸ್ಫೋಟ ಉಂಟಾಗಿದೆ ಎಂದು ಅಧ್ಯಕ್ಷ ಟಿಯೋಡೊರೊ ಒಬಿಯಾಂಗ್ ನುಗ್ಯುಮಾ ಹೇಳಿಕೆಯನ್ನು ನೀಡಿದ್ದಾರೆ. * ಬಾಟಾದ ಈ ಸ್ಫೋಟದಿಂದಾಗಿ ಬಹುತೇಕ ಎಲ್ಲ ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. * ಬಾಟಾದ ರಕ್ಷಣಾ ಸಚಿವಾಲಯನೀಡಿರುವ ಮಾಹಿತಿಯ ಪ್ರಕಾರ ಬ್ಯಾರಕ್'ನ ಶಸ್ತ್ರಾಸ್ತ್ರಗಳ ಶೇಖರಣೆಯ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದಾಗಿ ಅಧಿಕ ಪ್ರಮಾಣದ ಶಸ್ತ್ರಾಸ್ತ್ರಗಳ ಸ್ಫೋಟಕ್ಕೆ ಕಾರಣವಾಗಿದೆ.