Job Description: * ಪ್ರತಿ ವರ್ಷ ಮಾರ್ಚ್ 8 ರಂದು ಜಗತ್ತಿನಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. * ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಸ್ತ್ರೀಸಬಲೀಕರಣಕ್ಕಾಗಿ 'ಹರ್ ಸರ್ಕಲ್' ಎಂಬ ಯೋಜನೆಯನ್ನು ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಲೋಕಾರ್ಪಣೆ ಮಾಡಿದರು. * ಹರ್ಸರ್ಕಲ್.ಇನ್ ಎನ್ನುವದು ಒಂದು ಜಾಲತಾಣವಾಗಿದ್ದು, ಈ ಜಾಲತಾಣಕ್ಕೆ ನೀತಾ ಅಂಬಾನಿ ಚಾಲನೆ ನೀಡಿದರು. * ಈ ಹರ್ಸರ್ಕಲ್ ಯೋಜನೆಯಿಂದ ಮಹಿಳೆಯರು ಮಹಿಳೆಯರ ಜೊತೆ ಸೇರಿ ಶ್ರಮಿಸಿದರೆ ಉತ್ತಮವಾದ ಕೆಲಸಗಳನ್ನು ಸಾಧಿಸಬಹುದು ಎಂದು ತಿಳಿಸಲಾಗಿದೆ.