Job Description: * ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಸಂಸತ್ತಿನಲ್ಲಿ ವಿಶ್ವಾಸಮತ ಯಾಚಿಸಿ, ಬಹುಮತ ಪಡೆದುಕೊಂಡರು. * ಪ್ರಸ್ತುತ ಪಾಕಿಸ್ತಾನ ಡೆಮಾಕ್ರಾಟಿಕ್ ಮೂವ್ಮೆಂಟ್ ಅಭ್ಯರ್ಥಿ ಯೂಸೂಫ್ ರಾಜಾ ಗಿಲಾನಿ ವಿರುದ್ಧ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರು ಚುನಾವಣೆಯಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರಿಗೆ ಬಹುಮತ ಸಾಬೀತು ಪಡಿಸುವಂತೆ ವಿರೋದ ಪಕ್ಷದವರು ಕೇಳಿದ್ದರು. * ಪ್ರಸ್ತುತ ಪಾಕಿಸ್ತಾನ ಸಂಸತ್ತ 342 ಸದಸ್ಯ ಬಲ ಹೊಂದಿದೆ ವಿಶ್ವಾಸಮತ ಗಳಿಸಲು 172 ಮತಗಳ ಅಗತ್ಯವಿತ್ತು, ಸದ್ಯ ಇಮ್ರಾನ ಖಾನ್'ರವರು 178 ಸದಸ್ಯರ ಬೆಂಬಲ ಪಡೆದುಕೊಂಡ ಬಹುಮತ ಸಾಬೀತಪಡಿಸಿದ್ದಾರೆ.