Job Description: * ರಾಜ್ಯಸಭಾ ಟಿವಿ ಹಾಗೂ ಲೋಕಸಭಾ ಟಿವಿ ಇದೀಗ ಒಗ್ಗೂಡಿಸಿ "ಸಂಸದ್ ಟಿವಿ" ಎಂಬ ನೂತನ ಹೆಸರಿನ ನೂತನ ವಾಹಿನಿಯನ್ನು ಆರಂಭಿಸಲಾಗಿದೆ. * ಈ ನೂತನ ವಾಹಿನಿಯಲ್ಲಿ ಲೋಕಸಭೆ ಕಲಾಪಗನ್ನು ಹಿಂದಿ ಭಾಷೆಯಲ್ಲಿಯೂ ಹಾಗು ರಾಜ್ಯಸಭೆ ಕಲಾಪಗಳು ಇಂಗ್ಲಿಷ್ ಭಾಷೆಯಲ್ಲಿಯೂ ಪ್ರಸಾರ ಮಾಡಲಾಗುವದು. * 'ಸಂಸದ್ ಟಿವಿ' ವಾಹಿನಿಯ ಸಿಇಒ ಆಗಿ ನಿವೃತ್ತ ಐಎಎಸ್ ಅಧಿಕಾರಿ ರವಿ ಕಪೂರ್ ಅವರನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ. * ಲೋಕಸಭಾ ಟಿವಿ ಹಾಗೂ ರಾಜ್ಯಸಭಾ ಟಿವಿಗಳನ್ನು ಒಗ್ಗೂಡಿಸುವ ಕುರಿತು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ರಾಜ್ಯಸಭಾ ಸ್ಪೀಕರ್ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜಂಟಿಯಾಗಿ ಸಹಮತದಿಂದ ತೀರ್ಮಾನಿಸಿದರು.