Job Description: * ಛತ್ತೀಸ್ಗಡ ರಾಜ್ಯ ಪೊಲೀಸ್ ಇಲಾಖೆಯು ಇದೆ ಮೊದಲಬಾರಿಗೆ ಹದಿಮೂರು ತೃತೀಯ ಲಿಂಗಿಗಳನ್ನು ಕಾನ್ಸ್ಟೆಬಲ್ಗಳಾಗಿ ನಿಯೋಜಿಸಿಕೊಳ್ಳುವ ಮೂಲಕ ಮಾದರಿಯಾಗಿದೆ. * ಇತ್ತೀಚಿಗೆ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಛತ್ತೀಸ್ಗಡ ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಒಟ್ಟು 13 ತೃತೀಯ ಲಿಂಗಿಗಳನ್ನು ಕಾನ್ಸ್ಟೆಬಲ್ಗಳಾಗಿ ಆಯ್ಕೆಯಾಗಿದ್ದಾರೆ. * ಛತ್ತೀಸ್ಗಡದ ಹೊರತಾಗಿ ಈ ಮೊದಲು ತಮಿಳುನಾಡಿನಲ್ಲಿ ಒಬ್ಬರು ಹಾಗೂ ರಾಜಸ್ಥಾನದಲ್ಲಿ ಒಬ್ಬರು ತೃತೀಯ ಲಿಂಗಿ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. * ಇನ್ನು ಬಿಹಾರ ಸರ್ಕಾರ ಕೂಡ ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದೆ. * ಇನ್ನು ಸಂವಿಧಾನದಲ್ಲಿ ತೃತೀಯ ಲಿಂಗಿಗಳಿಗೆ ಮೂಲಭೂತ ಹಕ್ಕುಗಳ ಮೇಲೆ ಸಮಾನ ಅವಕಾಶವಿರುವುದಾಗಿ ಸುಪ್ರೀಂಕೋರ್ಟ್ 2014ರಲ್ಲಿ ಆದೇಶಿಸಿತ್ತು.