Job Description: * ಪ್ರಧಾನಿ ನರೇಂದ್ರ ಮೋದಿ ಅವರು 2021ರ ಸಾಗರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. * ಸಾಗರಮಾಲಾ ಯೋಜನೆಯಡಿ ಭಾರತವು 2035ರ ವೇಳೆಗೆ ಬಂದರುಗಳಲ್ಲಿ 6ಲಕ್ಷ.ಕೋಟಿ.ರೂಗಳ ಹೂಡಿಕೆಯನ್ನು ಮಾಡಲಿದೆ ಎಂದು ತಿಳಿಸಿದರು. ಏನಿದು ಸಾಗರಮಾಲಾ ಯೋಜನೆ: * ಸರಕಾರವು 2016ರಲ್ಲಿ ಸಾಗರಮಾಲಾ ಯೋಜನೆಯನ್ನು ಬಂದರುಗಳ ಅಭಿವೃದ್ಧಿಗಾಗಿ ಪ್ರಕಟಣೆ ಮಾಡಿತ್ತು. * ಈ ಸಾಗರಮಾಲಾ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ 2015-2035ರ ಅವಧಿಯಲ್ಲಿ 6 ಲಕ್ಷ .ಕೋಟಿ.ರೂ.ಗಳ ವೆಚ್ಚದಲ್ಲಿ 574 ಯೋಜನೆಗಳನ್ನು ಅನುಷ್ಠಾನಕ್ಕಾಗಿ ತರಲಾಗುವದು. * ಸದ್ಯ ಬಂದರುಗಳಲ್ಲಿನ ಮೂಲಸೌಕರ್ಯಗಳನ್ನು ಉನ್ನತೀಕರಿಸುವದು ಮತ್ತು ಮುಂದಿನ ಪೀಳಿಗೆಯ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಯೋಜನೆಯ ಆದ್ಯತೆ ಆಗಿದೆ. * ಪ್ರಸ್ತುತ ಈ ಯೋಜನೆಯಡಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿರುವ ಬಂದರುಗಳು ಮಹಾರಾಷ್ಟ್ರದ ವಾಧ್ವಾನ್, ಒಡಿಶಾದ ಪಾರಾದೀಪ್ ಮತ್ತು ಗುಜರಾತಿನ ದೀನದಯಾಳ್ನಲ್ಲಿ ಬೃಹತ್ ಬಂದರುಗಳು. * ಸರಕಾರವು 2030ರ ವೇಳೆಗೆ 23 ಜಲಮಾರ್ಗಗಳ ಕಾರ್ಯಾಚರಣೆಯ ಗುರಿಯನ್ನು ಹೊಂದಿದೆ. * ಬಂದರುಗಳಲ್ಲಿ ಪರಿಣಾಮಕಾರಿ ಪ್ರಾದೇಶಿಕ ವ್ಯಾಪಾರ ಮತ್ತು ಸಹಕಾರಗಳನ್ನು ಹೆಚ್ಚಿಸಲು ಬಾಂಗ್ಲಾದೇಶ, ನೇಪಾಳ, ಭೂತಾನ ಮತ್ತು ಮ್ಯಾನ್ಮಾರ್ನೊಂದಿಗೆ ಪ್ರಾದೇಶಿಕ ಸಂಪರ್ಕಕ್ಕಾಗಿ ಪೂರ್ವ ಜಲಮಾರ್ಗ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಲಾಗುವದು ಎಂದು ತಿಳಿಸಲಾಗಿದೆ.