Job Description: * ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ನಂದಕುಮಾರ್ ಸಿಂಗ್ ಚೌಹಾಣ್ ರವರು ಇತ್ತೀಚಿಗೆ ತಮ್ಮ 69 ವರ್ಷ ವಯಸ್ಸಿನಲ್ಲಿ ವಿಧಿವಶರಾದರು. * ಒಟ್ಟು ಆರು ಬಾರಿ ಸಂಸದರಾಗಿದ್ದ ನಂದಕುಮಾರ್ ಸಿಂಗ್ ಚೌಹಾಣ್ ರವರು ತಮ್ಮ ರಾಜಕೀಯ ಜೀವನವನ್ನು 1978 ರಲ್ಲಿ ಶಾಹಪುರ ಪುರಸಭೆಯಿಂದ ಪ್ರಾರಂಭಿಸಿದರು ಮತ್ತು ನಂತರ ಶಾಸಕರಾಗಿ ಆಯ್ಕೆಯಾದರು. * ಇವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದಾಗ 1985 ರಿಂದ 1996 ರವರೆಗೆ ಶಾಸಕರಾಗಿದ್ದರು, ಮತ್ತು ಇವರು 1998, 1999, 2004, 2014 ಮತ್ತು 2019 ರಲ್ಲಿ ಮರು ಆಯ್ಕೆಯಾಗಿದ್ದರು. * ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಚೌಹಾಣ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.