Job Description: * ಇನ್ನು ಪ್ರತಿ ತಿಂಗಳು 'ICC ತಿಂಗಳ ಆಟಗಾರ' ಪ್ರಶಸ್ತಿಯನ್ನು ನೀಡುವುದಾಗಿ ತಿಳಿಸಿತ್ತು, ಅದರಂತೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಫೆಬ್ರವರಿ ತಿಂಗಳ 3 ಆಟಗಾರರ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ. ನಾಮನಿರ್ದೇಶನ ಮಾಡಲಾದ 3 ಜನ ಆಟಗಾರರು: * ಪುರುಷ ವಿಭಾಗದಿಂದ ಆರ್. ಅಶ್ವಿನ್, ಜೋ ರೂಟ್ ಮತ್ತು ಕೈಲ್ ಮೇಯರ್. * ಮಹಿಳಾ ವಿಭಾಗದಿಂದ ಇಂಗ್ಲೆಂಡಿನ ಟಾಮಿ ಬೇಮಂಟ್, ನಥಾಲಿ ಶಿವರ್ ಮತ್ತು ನ್ಯೂಜಿಲ್ಯಾಂಡಿನ ಬ್ರೂಕ್ ಹಾಲಿಡೇ ಹೆಸರನ್ನು ನಿರ್ದೇಶನ ಮಾಡಲಾಗಿದೆ. * ಮಾರ್ಚ್. 8ರಂದು ವಿಜೇತರ ಹೆಸರನ್ನು ಘೋಷಿಸಲಾಗುವುದು. - ಪ್ರಸ್ತುತ ICCನ ತಿಂಗಳ ಚೊಚ್ಚಲ ಪ್ರಶಸ್ತಿಯನ್ನು ಭಾರತದ ವಿಕೆಟ್ ಕೀಪಿಂಗ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರು ಪಡೆದುಕೊಂಡಿದ್ದರು. * ಭಾರತದ ಆರ್. ಅಶ್ವಿನ್ ಫೆಬ್ರವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಆಡಿದ್ದರು. ಈ ಪಂದ್ಯಗಳಿಂದ ಒಟ್ಟು 176 ರನ್ ದಾಖಲಿಸಿ ಹಾಗೂ 24 ವಿಕೆಟ್'ಗಳನ್ನೂ ಪಡೆದುಕೊಂಡಿದ್ದಾರೆ. * ಜೋ ರೂಟ್'ರವರು 333 ರನ್ ಪಡೆದು ಅದರ ಜೊತೆಯಲ್ಲಿ ಬೌಲರ್ ಆಗಿ 6 ವಿಕೆಟ್ ಕೂಡ ಪಡೆದುಕೊಂಡಿದ್ದಾರೆ, ಮತ್ತು ಅಹ್ಮದಾಬಾದ್ ಟೆಸ್ಟ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದಾರೆ. * ವಿಂಡೀಸಿನ ಕೈಲ್ ಮೇಯರ್ ಅವರು ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅಜೇಯ ದ್ವಿಶತಕ ಬಾರಿಸಿ ಉತ್ತಮ ಸಾಧನೆಮಾಡಿದ್ದಾರೆ.