Job Description: * ಇದೇ ಮೊದಲ ಬಾರಿಗೆ ಭಾರತದ ವಾಯುಪಡೆಯು ಯುಎಇ(UAE)ನಲ್ಲಿ ಸಮರಾಭ್ಯಾಸ ನಡೆಸಲಿದ್ದು, ಈ ಸಮರಾಭ್ಯಾಸವು ಮಾರ್ಚ್ 3 ರಿಂದ ಆರಂಭಗೊಂಡು ಮಾರ್ಚ್ 21ರ ವರೆಗೆ ನಡುವೆ ನಡೆಯಲಿದ್ದು, ವಿವಿಧ ದೇಶಗಳ ವಾಯುಪಡೆಗಳು ಸಮರಾಭ್ಯಾಸದಲ್ಲಿ ಭಾವಹಿಸಲಿವೆ. * ವಾಯುಪಡೆಗಳ ಸಮರಾಭ್ಯಾಸವು 'ಎಕ್ಸಸೈಜ್ ಡಸರ್ಟ್ ಫ್ಲ್ಯಾಗ್-4' ಎಂದು ಕರೆಯಲ್ಪಡುವ ಅಲ್-ದಫ್ರಾ ವಾಯುನೆಲೆಯಲ್ಲಿ ಈ ಸಮರಾಭ್ಯಾಸ ನಡೆಯಲಿದೆ. ವಾಯುಪಡೆಯ ಸಮರಾಭ್ಯಾಸದಲ್ಲಿ ಭಾಗವಹಿಸುವ ದೇಶಗಳು: * ಯುಎಇ, ಅಮೆರಿಕ, ಫ್ರಾನ್ಸ್, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಬಹರೇನ್ನ ವಾಯುಪಡೆಗಳು ಈ ಸಮರಾಭ್ಯಾಸದಲ್ಲಿ ಭಾಗವಹಿಸಲಿವೆ ಎಂದು ಭಾರತೀಯ ವಾಯುಪಡೆಯ ಮೂಲಗಳು ಖಚಿತ ಪಡಿಸಿವೆ. * ಒಟ್ಟಾರೆ ಈ ಸಮರಾಭ್ಯಾಸದಲ್ಲಿ ಭಾರತೀಯ ವಾಯುಪಡೆಯ 6 ಎಸ್ಯು-30 ಎಂಕೆಐ, ಎರಡು ಸಿ-17 ಹಾಗೂ ಒಂದು ಐಎಲ್-78 ಟ್ಯಾಂಕರ್ ಯುದ್ಧವಿಮಾನಗಳು ಭಾಗವಹಿಸಲಿವೆ. * ಈ ವಾಯುಪಡೆಯ ಸಮರಾಭ್ಯಾಸಕ್ಕೆ ಯುದ್ಧವಿಮಾನಗಳನ್ನು ಯುಎಇಗೆ ತಗೆದುಕೊಂಡು ಹೋಗಲು ಮತ್ತು ಮರಳಿ ಯುದ್ಧವಿಮಾನಗಳನ್ನು ತರುವ ಕಾರ್ಯಕ್ಕೆ ಸಿ-17 ಗ್ಲೋಬ್ಮಾಸ್ಟರ್ಅನ್ನು ಬಳಸಿಕೊಳ್ಳಲಾಗುತ್ತದೆ ಎಂದೂ ವಾಯುಪಡೆ ಮಾಹಿತಿಯನ್ನು ನೀಡಿದೆ.