Job Description: ಭಾರತದ ಬಾಹ್ಯಾಕಾಶ ಸಂಸ್ಥೆ 2021 ನೇ ಸಾಲಿನ ತನ್ನ ಮೊದಲ ಉಡಾವಣೆಯನ್ನು ದಿನಾಂಕ 28 ಫೆಬ್ರುವರಿ 2021 ರಂದು ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿಸಿದ್ದು, ಈ ಉಡಾವಣೆಯಲ್ಲಿ ಬ್ರೆಜಿಲ್ನ ಅಮೇಜಾನಿಯಾ-1 ಸೇರಿದಂತೆ ಒಟ್ಟು 19 ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸಲಾಯಿತು. * PSLV-C51 ರಾಕೆಟ್ ಮೂಲಕ ಈ 19 ಉಪಗ್ರಹಗಳನ್ನ ಉಡಾವಣೆ ಮಾಡಲಾಯಿತು. * ಈ 19 ಉಪಗ್ರಹಗಳ ಪೈಕಿ ಬ್ರೆಜಿಲ್ ದೇಶದ ಅಮೇಜಾನಿಯಾ-1 ಉಪಗ್ರಹ ಪ್ರಮುಖವಾಗಿದ್ದು, ಇದು ಭಾರತದಲ್ಲಿ ಉಡಾವಣೆಗೊಂಡ ಬ್ರೆಜಿಲಿಯನ್ ನ ಮೊದಲ ಉಪಗ್ರಹವಾಗಿದೆ. ಈ ಉಪಗ್ರಹವು ಒಟ್ಟು 637 KG ತೂಕ ಹಿಂದಿದ್ದು, ಇದು ಅಮೇಜಾನ್ ಪ್ರದೇಶದ ಅರಣ್ಯನಾಶ ಹಾಗೂ ಬ್ರೆಜಿಲ್ನ ವೈವಿಧ್ಯಮಯ ಕೃಷಿಕಾರಿಕೆಯ ವಿಶ್ಲೇಷಣೆಗಾಗಿ ಬಳಕೆಯಾಗಲಿದೆ. * ಇನ್ನು ಚೆನ್ನೈ ಮೂಲದ ಸ್ಪೇಸ್ ಕಿಡ್ಜ್ ಇಂಡಿಯಾ, ಸತೀಶ್ ಧವನ್ ಸ್ಯಾಟ್, ಯೂನಿಟಿ ಸ್ಯಾಟ್ 3 ಉಪಗ್ರಹ, ಇಸ್ರೋದ ನ್ಯೂಸ್ಪೇಸ್ ಇಂಡಿಯಾ ಸಂಸ್ಥೆಯ 14 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು. * ಈ ಬಾಹ್ಯಾಕಾಶ ನೌಕೆಯ ಮೇಲಿನ ಪ್ಯಾನೆಲ್ ನಲ್ಲಿ ಪ್ರಧಾನಿ ಮೋದಿ ಚಿತ್ರವನ್ನು ಮುದ್ರಿಸಲಾಗಿದ್ದು, SD ಕಾರ್ಡಿನಲ್ಲಿ ಭಗವದ್ಗೀತೆ ಹಾಗೂ ಎಸ್ ಡಿ ಸ್ಯಾಟ್ ನಲ್ಲಿ ಒಟ್ಟು 25,000 ಜನರ ಹೆಸರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. * * ಅಮೆಜಾನಿಯ-1 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಬಳಿಕ ಭಾರತದ ಪ್ರಧಾನಿ ಮೋದಿಯವರು ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸನಾರೊ ಅವರನ್ನು ಅಭಿನಂದಿಸಿದರು.