Job Description: ಅಮೆರಿಕದಲ್ಲಿ ಕೋವಿಡ್-19 ವಿರುದ್ದದ ಸಮರಕ್ಕೆ ಮತ್ತೊಂದು ಲಸಿಕೆ ಜೊತೆಗೂಡಿದ್ದು, ತುರ್ತು ಸಂದರ್ಭದ ಬಳಕೆಗಾಗಿ ಜಾನ್ಸನ್ ಆಯಂಡ್ ಜಾನ್ಸನ್ ಸಂಸ್ಥೆಯ ಲಸಿಕೆಯನ್ನು ಬಳಸಿಕೊಳ್ಳಲು ಅಮೆರಿಕಾವು ಅನುಮತಿ ನೀಡಿದೆ. * ಕೊರೊನಾ ವೈರಸ್ ಸೋಂಕಿನಿಂದ ಅಮೇರಿಕಾದಲ್ಲಿ ಇದುವರೆಗೆ ಸುಮಾರು 5,00,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. * ಜಾನ್ಸನ್ ಆಯಂಡ್ ಜಾನ್ಸನ್ ಸಂಸ್ಥೆಯ ಲಸಿಕೆಯು ಹೊಸ ಸ್ವರೂಪದ ಕೊರೊನಾ ವೈರಸ್ ಸೇರಿದಂತೆ ಕೋವಿಡ್-19 ನಿಯಂತ್ರಣದಲ್ಲಿ ಲಸಿಕೆಯ ಬಳಕೆ ಪರಿಣಾಮಕಾರಿಯಾಗಲಿದೆ ಎಂದು ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ತಿಳಿಸಿದೆ. * ಇನ್ನು ಅಮೇರಿಕಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅನುಮತಿ ಪಡೆದುಕೊಂಡಿರುವ ಮೂರನೇ ಲಸಿಕೆ ಇದಾಗಿದ್ದು, ಕಳೆದ ಡಿಸೆಂಬರ್ನಲ್ಲಿ ಫೈಝರ್ ಮತ್ತು ಮಾಡರ್ನಾ ಲಸಿಕೆಗಳಿಗೆ ಅನುಮತಿ ದೊರೆತಿತ್ತು.