Job Description: ಚನ್ನಪಟ್ಟಣ: ಆತ್ಮನಿರ್ಭರ ಭಾರತ ಯೋಜನೆಯಡಿ ಇತ್ತೀಚಿಗೆ ಆರಂಭಗೊಂಡ “ದಿ ಇಂಡಿಯಾ ಟಾಯ್ಸ್ ಫೇರ್ 2021" ನಲ್ಲಿ ರಾಜ್ಯದ ಪ್ರಸಿದ್ಧ ಚನ್ನಪಟ್ಟಣ ಗೊಂಬೆಗಳನ್ನೂ ವರ್ಚುವಲ್ ಪ್ರದರ್ಶನಕ್ಕಿಡಲಾಗಿದ್ದು, ಈ ಮೂಲಕ ಗೊಂಬೆಗಳಿಗೆ ವಿಶ್ವ ಮಾನ್ಯತೆದೊರೆತಿದ್ದು, ಈ ಮೂಲಕ ಚನ್ನಪಟ್ಟಣವೂ ಸೇರಿದಂತೆ ದೇಶದ ವಿವಿಧ ಗೊಂಬೆ ತಯಾರಕರಲ್ಲಿ ಹೊಸ ಭರವಸೆ ಮೂಡಿದೆ. ಚನ್ನಪಟ್ಟಣದ ಗೊಂಬೆಗಳ ಉದ್ಯಮದ ಬಗ್ಗೆ : * ಚನ್ನಪಟ್ಟಣದಲ್ಲಿ ಸುಮಾರು 2 ಸಾವಿರ ಕರಕುಶಲಕರ್ಮಿಗಳು ಸುಮಾರು 200 ವರ್ಷಗಳಿಂದ ಗೊಂಬೆ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. * ಚನ್ನಪಟ್ಟಣದ ಗೊಂಬೆಗಳನ್ನು ಯಾವುದೇ ರಾಸಾಯನಿಕಗಳನ್ನು ಬಳಸದೆ ತಯಾರಿಸಲಾಗುತ್ತದೆ. * ಈ ಗೊಂಬೆ ತಯಾರಿಕಾ ಉದ್ಯಮದಲ್ಲಿ ಶೇ.80ರಷ್ಟು ಮಂದಿ ಪುರುಷರು, ಶೇ. 20ರಷ್ಟು ಮಹಿಳೆಯರು ಪಾಲ್ಗೊಂಡಿದ್ದಾರೆ.