Job Description: ಸುಪ್ರೀಂ ಕೋರ್ಟ್ ಇನ್ನು ಮೇಲೆ ತನ್ನ ಯಾವುದೇ ವಾಟ್ಸ್ ಆಯಪ್ (Messaging App) ಗ್ರೂಪ್ ಗಳ ಮೂಲಕ ಕೋರ್ಟ್ ವಿಚಾರಣೆಗಳ ವಿಡಿಯೋ ಕಾನ್ಫರೆನ್ಸ್ ಲಿಂಕ್ ಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಸ್ಪಷ್ಟಪಡಿಸಿದೆ. ಇನ್ನು ವಾಟ್ಸ್ ಆಪ್ ಬದಲಿಗೆ, ವರ್ಚುವಲ್ ಕೋರ್ಟ್ ವಿಚಾರಣೆಗಳ ಲಿಂಕ್ ಗಳನ್ನು ಇನ್ನು ನೋಂದಾಯಿತ ಇಮೇಲ್ ಐಡಿಗಳು ಅಥವಾ ನೋಂದಾಯಿತ ವಕೀಲರ ಮೊಬೈಲ್ ಸಂಖ್ಯೆಗಳಲ್ಲಿ ನೇರವಾಗಿ ಕಳುಹಿಸಲಾಗುವದು ಎಂದು ರಿಜಿಸ್ಟ್ರಿ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.