Job Description: * ಸೊಲಾಪುರ - ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಡಾಂಬರೀಕರಣ ಕಾಮಗಾರಿ ನಡೆದಿದ್ದು, ಇದೆ ವೇಳೆ ಕೇವಲ 18 ಗಂಟೆಗಳಲ್ಲಿ 25.54 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಪೂರ್ಣಗೊಳಿಸಲಾಗಿದೆ. * ಈ 110 ಕಿ.ಮೀ. ಉದ್ದದ ರಸ್ತೆಯು ಸೊಲ್ಲಾಪುರ ಮತ್ತು ವಿಜಯಪುರ ನಗರಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಾಗಿದೆ. * ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ದ್ವಿಪಥದಿಂದ ಚತುಷ್ಪಥಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿ ಕೇಂದ್ರ ಸರಕಾರ 1,540 ಕೋಟಿ ರೂ. ವೆಚ್ಚ ಮಾಡುತ್ತಿದೆ. * ರಾಷ್ಟ್ರೀಯ ಹೆದ್ದಾರಿಯ ಡಾಂಬರೀಕರಣ ಕಾಮಗಾರಿಗೆ 500 ಜನ ಕಾರ್ಮಿಕರ ನಿರಂತರ ಪರಿಶ್ರಮದಿಂದ ಈ ಕಾಮಗಾರಿ ಸಾಧ್ಯವಾಗಿದೆ, ಮತ್ತು ಲಿಮ್ಕಾ ಪುಸ್ತಕದಲ್ಲಿ ದಾಖಲೆಯನ್ನು ಬರೆದಿದೆ. * ಈ ಹಿಂದೆ ದೇಶದಲ್ಲಿ ನಿತ್ಯ ಹೆದ್ದಾರಿಯ 3 ಕಿ.ಮೀ. ಕಾಮಗಾರಿ ನಡೆಯುತ್ತಿತ್ತು ಇದೀಗ ಕನಿಷ್ಠ 100 ಕಿ.ಮೀ. ನಿರ್ಮಾಣವಾಗುತ್ತಿದೆ ಎಂದು ತಿಳಿಸಲಾಗಿದೆ.