Job Description: * ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ಅಟಿಕೆ ಮೇಳ-2021 (ದಿ ಇಂಡಿಯಾ ಟಾಯ್ ಫೇರ್ 2021) ಉದ್ಘಾಟಣೆ ಮಾಡಿದರು. * 'ದಿ ಇಂಡಿಯಾ ಟಾಯ್ ಫೇರ್ 2021' ದಿನಾಂಕ ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ನಡೆಯಲಿದೆ, ಈ ಮೇಳದಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 1000ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಸಾಮಗ್ರಿಗಳನ್ನು ಇ-ಕಾಮರ್ಸ್ ಸಕ್ರಿಯಗೊಳಿಸಿದ ವರ್ಚುವಲ್ ಪ್ರದರ್ಶನದಲ್ಲಿ ಪ್ರದರ್ಶನ ಮಾಡಲಿದ್ದಾರೆ. * ಖರೀದಿದಾರರು, ಮಾರಾಟಗಾರರು, ಉದ್ಯಮದ ಸಮಗ್ರ ಅಭಿವೃದ್ಧಿಗೆ ಸಂವಾದವನ್ನು ಉತ್ತೇಜಿಸುವುದು ಈ ಆಟಿಕೆ ಮೇಳದ ಉದ್ದೇಶವಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿಯನ್ನು ನೀಡಿದೆ. * ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು 2020ರ ಆಗಸ್ಟ್ ನಲ್ಲಿ ಮನ್ ಕಿ ಬಾತ್ ಭಾಷಣದಲ್ಲಿ, ಮಗುವಿನ ಬೆಳವಣಿಗೆಯಲ್ಲಿ ಅಟಿಕೆಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ತಿಳಿಸಿದ್ದರು. * ಭಾರತದಲ್ಲಿ ಅಟಿಕೆಗಳ ಉತ್ಪಾದನೆ ಹೆಚ್ಚಿಸುವ ಸಲುವಾಗಿ ದೇಶದಲ್ಲಿ ಅಟಿಕೆಗಳ ಉತ್ಪಾದನೆಗೆ ಉತ್ತೇಜನ ನೀಡಲು ಭಾರತೀಯ ಅಟಿಕೆ ಮೇಳ 2021 ಆಯೋಜಿಸಲಾಗಿದೆ.