Job Description: * ಕೇಂದ್ರ ಚುನಾವಣಾ ಆಯೋಗವು 5 ರಾಜ್ಯಗಳಾದ ತಮಿಳುನಾಡು, ಕೇರಳ, ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ, ಹಾಗೂ ಮೇ 2ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಚುನಾವಣೆಯ 5 ರಾಜ್ಯಗಳು ಮತ್ತು ಮತ ಕ್ಷೇತ್ರಗಳ ವಿವರ: * ತಮಿಳುನಾಡು ರಾಜ್ಯ 234 ಕ್ಷೇತ್ರ, ಕೇರಳ ರಾಜ್ಯ140 ಕ್ಷೇತ್ರ, ಪುದುಚೇರಿ ರಾಜ್ಯ 30 ಕ್ಷೇತ್ರ, ಈ ಮೂರೂ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ. * ಪಶ್ಚಿಮ ಬಂಗಾಳ ರಾಜ್ಯ 294 ಕ್ಷೇತ್ರಗಳಲ್ಲಿ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. * ಅಸ್ಸಾಂ ರಾಜ್ಯ126 ಕ್ಷೇತ್ರಗಳಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ, ಎಂದು ಕೇಂದ್ರ ಚುನಾವಣೆ ಆಯೋಗ ತಿಳಿಸಿದೆ. * ಪ್ರಸ್ತುತ ಈ 5 ರಾಜ್ಯಗಳಲ್ಲಿ 824 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತದೆ ಒಟ್ಟಾರೆ 18.68 ಕೋಟಿ ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. * ಕೇಂದ್ರಾಡಳಿತ ಪ್ರದೇಶ ಪುದುಚೇರಿ ಮತ್ತು 4 ರಾಜ್ಯಗಳ ಚುನಾವಣೆಗಾಗಿ 2.7 ಲಕ್ಷ ಮತ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಚುನಾವಣಾ ಆಯೋಗ ಮುಖ್ಯಸ್ಥ ಸುನೀಲ್ ಅರೋರಾ ಅವರು ಮಾಹಿತಿಯನ್ನು ನೀಡಿದ್ದಾರೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಮತ ಕ್ಷೇತ್ರಗಳ ಚುನಾವಣೆಗಳ ದಿನಾಂಕ ಪ್ರಕಟ: * ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯುತ್ತದೆ. * ಅಸ್ಸಾಂ ರಾಜ್ಯದಲ್ಲಿ 3 ಹಂತದಲ್ಲಿ ಚುನಾವಣೆ ನಡೆಯಲಿದೆ.