Job Description: * ಭಾರತ-ಪಾಕಿಸ್ತಾನ LOC ಒಪ್ಪಂದಗಳ ಕಟ್ಟುನಿಟ್ಟಿನ ಪಾಲನೆಗೆ ಪರಸ್ಪರ ಒಪ್ಪಿಗೆಯನ್ನು ನೀಡಿವೆ. * ಭಾರತ-ಪಾಕಿಸ್ತಾನ ದೇಶಗಳು ಫೆಬ್ರವರಿ 25 ರಂದು ಡಿಜಿಎಂಒ ಮಟ್ಟದ ಮಾತುಕತೆಯಲ್ಲಿ ಪಾಲ್ಗೊಂಡಿದ್ದವು ಈ ಸಭೆಯಲ್ಲಿ ಎಲ್ಒಸಿ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದಕ್ಕೆ ಎರಡು ದೇಶಗಳು ಪರಸ್ಪರ ಒಪ್ಪಿಗೆಯನ್ನು ನೀಡಿವೆ. * ಭಾರತ-ಪಾಕಿಸ್ತಾನ ಈ ಎರಡು ದೇಶಗಳೂ ಎಲ್ಲಾ ಒಪ್ಪಂದಗಳು, ಕದನವಿರಾಮ ಉಲ್ಲಂಘನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿವೆ, ಇದು ಫೆಬ್ರವರಿ.24-25 ರಿಂದಲೇ ಜಾರಿಗೆ ಬರಲಿದೆ ಎಂದು ಜಂಟಿ ಹೇಳಿಕೆಯಲ್ಲಿ ಈ ಒಪ್ಪಂದಗಳ ಬಗ್ಗೆ ತಿಳಿಸಲಾಗಿದೆ. * ಒಂದು ವೇಳೆ ಕಠಿಣ ಪರಿಸ್ಥಿತಿಗಳು ಎದುರಾದಲ್ಲಿ ಅವುಗಳನ್ನು ನಿಭಾಯಿಸುವುದಕ್ಕೆ ಹಾಟ್ ಲೈನ್ ಸಂಪರ್ಕ ಹಾಗೂ ಗಡಿ ಧ್ವಜ ಸಭೆಗಳನ್ನು ಬಳಕೆ ಮಾಡಿಕೊಳ್ಳುವುದಾಗಿ ಜಂಟಿ ಹೇಳಿಕೆಯಲ್ಲಿ ಈ ಎರಡು ರಾಷ್ಟ್ರಗಳು ಒಪ್ಪಿಕೊಂಡಿವೆ.