Job Description: * ಕೇರಳ ರಾಜ್ಯದಲ್ಲಿ 18 ರಿಂದ 55 ವರ್ಷದೊಳಗಿನ ಐಟಿ ಕ್ಷೇತ್ರದ ಉದ್ಯೋಗಿಗಳಿಗಾಗಿ ಕಲ್ಯಾಣ ನಿಧಿ ಸ್ಥಾಪಿಸಲಾಗಿದೆ, ಹಾಗೂ ಇದು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸ್ಥಾಪನೆಯಾದ ಕಲ್ಯಾಣ ನಿಧಿ ಇದಾಗಿದೆ. * ಸುಮಾರು 10 ವರ್ಷಗಳ ಕಾಲ ಕಲ್ಯಾಣ ನಿಧಿಯಿಂದ ನೌಕರರಿಗೆ ಪಿಂಚಣಿಯಾಗಿ 3,000 ರೂ. ನೀಡಲಾಗುವದು. * ಐಟಿ ಉದ್ಯೋಗಿಗಳ ಎರಡು ಕಲ್ಯಾಣ ಸಂಸ್ಥೆಗಳಾದ ಪ್ರತಿಧ್ವನಿ ಮತ್ತು ಪ್ರೋಗ್ರೆಸ್ಸಿವ್ ಟೆಕೀಸ್ ಕಲ್ಯಾಣ ನಿಧಿಯನ್ನು ಸ್ಥಾಪಿಸುವಂತೆ ಒತ್ತಾಯಿಸುತ್ತಿದ್ದವು, ಹೀಗಾಗಿ ಸರ್ಕಾರದ ನಿರ್ಧಾರದಿಂದ ಸಂಘಟನೆಯ ಅಧಿಕಾರಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. * ಕೇರಳ ರಾಜ್ಯದಲ್ಲಿ ಐಟಿ ಉದ್ಯೋಗಿಗಳಿಗೆ ಕಲ್ಯಾಣ ನಿಧಿಯನ್ನು ಜಾರಿಗೆ ತಂದಿರುವುದು ಭಾರತದಲ್ಲಿ ಇದೇ ಮೊದಲು ಎಂದು ಪ್ರತಿಧ್ವನಿ ಸಂಸ್ಥೆಯ ಕಾರ್ಯದರ್ಶಿ ವಿನೀತ್ ಚಂದ್ರನ್ ತಿಳಿಸಿದ್ದಾರೆ. * ಪ್ರಸ್ತುತ ಜರ್ಮನಿ, ಡೆನ್ಮಾರ್ಕ್, ಮತ್ತು ಯುಕೆ ಮುಂತಾದ ದೇಶಗಳಲ್ಲಿ ಐಟಿ ಉದ್ಯೋಗಿಗಳಿಗೆ ವಿಮಾ ಯೋಜನೆಗಳಿವೆ. * ಕಲ್ಯಾಣ ನಿಧಿಯು ಐಟಿ ಕ್ಷೇತ್ರದಲ್ಲಿ ಇರುವವರಿಗೆ ಪಿಂಚಣಿ ಮತ್ತು ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳು, ಹೆರಿಗೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿದೆ 'ಎಂದು ತಿಳಿಸಲಾಗಿದೆ. * 2017 ಮತ್ತು 2018 ರಲ್ಲಿ ಐಟಿ ಉದ್ಯೋಗಿಗಳಿಗೆ ಕಲ್ಯಾಣ ಮಂಡಳಿ ಸ್ಥಾಪಿಸುವ ಬಗ್ಗೆ ಪ್ರತಿಧ್ವನಿ ಅಧಿಕಾರಿಗಳು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮನವಿ ಮಾಡಿದ್ದರು.