Job Description: * ಚೀನಾ ದೇಶವು ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ ತೀವ್ರ ಕಡುಬಡತನ ಸಂಪೂರ್ಣವಾಗಿ ಅಂತ್ಯವಾಗಿದೆ ಎಂದು ಅಧ್ಯಕ್ಷ ಕ್ಸಿ ಜಿನ್ಪಿಂಗ್ ರಿಂದ ನವೆಂಬರ್ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. * ಚೀನಾದಲ್ಲಿ ಈ ವೇಳೆಗಾಗಲೇ 99 ಮಿಲಿಯನ್ ಜನರ ವಾರ್ಷಿಕ ಆದಾಯವು 2,300 ಯುವಾನ್ (355 ಡಾಲರ್) ಗಿಂತಲೂ ಕಡಿಮೆಯಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಲಾಗಿದೆ. * ಈ ಹಿಂದೆ ಚೀನಾದಲ್ಲಿ 2012ರಲ್ಲಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬಡತನ ನಿರ್ಮೂಲನೆಯೇ ಮೂಲಗುರಿ ಎಂದು ಘೋಷಿಸಿದ್ದರು. ಅಲ್ಲದೆ, ಚೀನಾ ಬಡತನ ನಿರ್ಮೂಲನೆ ಮಾಡುವ UN ಗುರಿ 2030ನ್ನು 10 ವರ್ಷಗಳ ಮುಂಚಿತವಾಗಿ ಸಾಧಿಸಿದೆ ಎಂದು ಅವರು ಹೇಳಿದರು. * ಚೀನಾ ದೇಶದಲ್ಲಿನ ಜನರು ಕಳೆದ ಎಂಟು ವರ್ಷಗಳಲ್ಲಿ ಬಡತನ ರೇಖೆಯಡಿಯಲ್ಲಿ ವಾಸಿಸುತ್ತಿರುವ ಅಂತಿಮ 98.99 ಮಿಲಿಯನ್ ಬಡ ಗ್ರಾಮೀಣ ನಿವಾಸಿಗಳಾಗಿದ್ದು ಅವರೆಲ್ಲರನ್ನೂ ಬಡತನ ರೇಖೆಗಿಂತ ಮೇಲೆತ್ತಲಾಗಿದೆ ಎಂದು ಚೀನಾ ತಿಳಿಸಿದೆ. * ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಪ್ರಕಾರ 27 ಮಿಲಿಯನ್ ಜನತೆಯ ಮನೆ ನವೀಕರಿಸಲಾಗಿದೆ ಮತ್ತು ಸರಿ ಸುಮಾರು 10 ಮಿಲಿಯನ್ ಜನರು ಹೊಸ ಮನೆಗಳಿಗೆ ತೆರಳಿದರು ಇದಕ್ಕಾಗಿ ಸರ್ಕಾರ ಒಟ್ಟು 1.6 ಟ್ರಿಲಿಯನ್ ಯುವಾನ್ ( 250 ಬಿಲಿಯನ್) ಖರ್ಚು ಮಾಡಿದೆ ಎಂದು ತಿಳಿಸಿದ್ದಾರೆ. * ಚೀನಾ ದೇಶವು ಬಡತನ ನಿವಾರಣೆಗೆ ಸುಮಾರು 1.6 ಟ್ರಿಲಿಯನ್ ಯುವಾನ್ ಹಣವನ್ನು ಹೂಡಿಕೆ ಮಾಡಿರುವುದಾಗಿ ತಿಳಿಸಿದೆ.