Job Description: * ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಮ್ಮ ಕಾರ್ಗೋ ಯೋಜನೆಗೆ ಇತ್ತೀಚಿಗೆ ಚಾಲನೆ ನೀಡಿದರು. * ಈ ಕಾರ್ಗೋ ಯೋಜನೆಯಿಂದಾಗಿ ಸಾರಿಗೆ ಇಲಾಖೆಯ ಆದಾಯವನ್ನು ಹೆಚ್ಚಿಸಿ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯವನ್ನು ನೀಡುತ್ತದೆ ಎಂದು ತಿಳಿಸಲಾಗಿದೆ. * ಸಾರಿಗೆ ಸಚಿವ ಲಕ್ಷ್ಮಣ ಸವದಿ, ಮೊದಲ ಹಂತದಲ್ಲಿ ರಾಜ್ಯದ 88 ಬಸ್ ನಿಲ್ದಾಣಗಳಲ್ಲಿ ಹಾಗೂ ಅಂತರರಾಜ್ಯದ 21 ನಿಲ್ದಾಣಗಳಲ್ಲಿ ಈ ಕಾರ್ಗೋ ಸೇವೆ ಆರಂಭವಾಗಲಿದೆ ಹಾಗೂ ಹಂತ ಹಂತವಾಗಿ ರಾಜ್ಯದ ಎಲ್ಲ ಕಡೆ ವಿಸ್ತರಿಸಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದರು. * ಕಾರ್ಗೋ ಯೋಜನೆಯ ಮೂಲಕ ಬಸ್ ನಿಲ್ದಾಣಗಳಲ್ಲಿ ಪಾರ್ಸೆಲ್ ಕೌಂಟರ್ ಸ್ಥಾಪಿಸಲಾಗುತ್ತದೆ ಮತ್ತು ಗ್ರಾಹಕರು ತಮ್ಮ ಪಾರ್ಸಲ್ಗಳನ್ನು ನೋಂದಾಯಿಸಿ ಬೇರೆ ಬೇರೆ ಸ್ಥಳಗಳಿಗೆ ರವಾನಿಸಬಹುದಾಗಿದೆ. * ಗ್ರಾಹಕರು ಪಾರ್ಸೆಲ್ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕಾಲ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ, ಹಾಗೂ ಗ್ರಾಹಕರ ವಸ್ತುಗಳಿಗೆ ವಿಮಾ ಸೌಲಭ್ಯ ಅವಕಾಶವೂ ಇರಲಿದೆ ಎಂಬ ಮಾಹಿತಿಯನ್ನು ತಿಳಿಸಿದರು.