Job Description: * ಕೇಂದ್ರ ಸರ್ಕಾರವು ಫೆಬ್ರವರಿ 23, 2021ರಂದು ‘ರಾಷ್ಟ್ರೀಯ ನಗರ ಡಿಜಿಟಲ್ ಮಿಷನ್’ ಅನ್ನು ಪ್ರಾರಂಭಿಸಿದೆ. * ರಾಷ್ಟ್ರೀಯ ನಗರ ಡಿಜಿಟಲ್ ಮಿಷನ್ ಅನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಪ್ರಾರಂಭಿಸಿದರು. * ಈ ಮಿಷನ್ 2022 ರ ವೇಳೆಗೆ ನಗರಗಳಲ್ಲಿ ನಗರ ಆಡಳಿತ ಮತ್ತು ಸೇವಾ ವಿತರಣೆಗೆ ನಾಗರಿಕ ಕೇಂದ್ರಿತ ಮತ್ತು ಪರಿಸರ ವ್ಯವಸ್ಥೆ-ಚಾಲಿತ ವಿಧಾನವನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದೆ. * ಈ ರಾಷ್ಟ್ರೀಯ ನಗರ ಡಿಜಿಟಲ್ ಮಿಷನ್ ಸೇವಾ ವಿತರಣೆಗಳು ಅಂದರೆ ಸ್ಮಾರ್ಟ್-ಕೋಡ್, ಇಂಡಿಯಾ ಅರ್ಬನ್ ಡಾಟಾ ಎಕ್ಸ್ಚೇಂಜ್, ಸ್ಮಾರ್ಟ್ ಸಿಟೀಸ್ 2.0 ವೆಬ್ಸೈಟ್, ಮತ್ತು ಜಿಯೋಸ್ಪೇಷಿಯಲ್ ಮ್ಯಾನೇಜ್ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ ನಂತಹ ಉಪಕ್ರಮಗಳನ್ನು ಈ ವರ್ಚುವಲ್ ಸಭೆಯಲ್ಲಿ ಪ್ರಾರಂಭಿಸಲಾಯಿತು. * ಇಂಡಿಯಾ ಅರ್ಬನ್ ಡಾಟಾ ಎಕ್ಸ್ಚೇಂಜ್ ಉಪಕ್ರಮವನ್ನು ಸ್ಮಾರ್ಟ್ ಸಿಟೀಸ್ ಮಿಷನ್ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. * ಪ್ರಸ್ತುತ ದೇಶದ ಎಲ್ಲಾ ನಗರಗಳಿಗೆ ಡಿಜಿಟಲ್ ಮೂಲಸೌಕರ್ಯವನ್ನು ಒದಗಿಸುವ ಸಲುವಾಗಿ ಈ ಮಿಷನ್ ಪ್ರಾರಂಭಿಸಲಾಗಿದೆ.