Job Description: * ಗುಜರಾತನ ಸೂರತ್ ಮಹಾನಗರ ಪಾಲಿಕೆ (ಎಸ್ಎಂಸಿ) ಚುನಾವಣೆಯಲ್ಲಿ 22 ವರ್ಷದ ಮಾಡೆಲ್ ಮತ್ತು ವೃತ್ತಿಯಲ್ಲಿ ನಟಿ ಪಯಾಲ್ ಪಟೇಲ್ ಜಯ ದಾಖಲಿಸಿದ್ದಾರೆ. * ಗುಜರಾತ್ನ ಸೂರತ್ನಲ್ಲಿ ವಾರ್ಡ್ 16 ರ ಕಿರಿಯ ಕಾರ್ಪೊರೇಟರ್ ಆಗಿ ಆಮ್ ಆದ್ಮಿ ಪಕ್ಷದ(AAP) ಅಭ್ಯರ್ಥಿ ಜಯ ಸಾಧಿಸಿದ್ದಾಳೆ. * ಅಮ್ರೆಲಿಯ ಅಂತಿಮ ವರ್ಷದ ಬಿ ಕಾಮ್ ವಿದ್ಯಾರ್ಥಿನಿ ಪಟೇಲ್ ತನ್ನ ಪ್ರತಿಸ್ಪರ್ಧಿಯಾದ ಬಿಜೆಪಿ ಅಭ್ಯರ್ಥಿಯ ವಿರುದ್ಧ 12,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. * ಪಾಯಲ್ ಪಟೇಲ್ ನಟಿ ಮತ್ತು ಗುಜರಾತಿ ಚಿತ್ರ 'ತಾರಿ ಮಾರಿ ದೋಸ್ತಿ' ಯಲ್ಲಿ ನಟಿಸಿದ್ದಾರೆ, ಹಾಗೂ ಅವರು 50 ಕ್ಕೂ ಹೆಚ್ಚು ಹಾಡುಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಗುಜರಾತ್'ನಲ್ಲಿ 6 ಮಹಾನಗರ ಪಾಲಿಕೆಗಳಿವೆ: * ಅಹಮದಾಬಾದ್, ಸೂರತ್, ವಡೋದರಾ, ರಾಜ್ಕೋಟ್, ಜಮ್ನಗರ ಮತ್ತು ಭಾವನಗರ, ಎಂಬ ಮಹಾನಗರ ಪಾಲಿಕೆಗಳಿವೆ ಸದ್ಯ ಬಿಜೆಪಿ ಈ ಪಾಲಿಕೆಗಳಲ್ಲಿ ಅದ್ಭುತ ಗೆಲುವು ದಾಖಲಿಸಿದೆ. * ಸೂರತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ AAP ಪಕ್ಷ ಎಸ್ಎಂಸಿಯಲ್ಲಿ 120 ಸ್ಥಾನಗಳಲ್ಲಿ 27 ಸ್ಥಾನಗಳನ್ನು ಗೆದ್ದುಕೊಂಡಿದೆ.