Job Description: * ಕೊಂಕಣಿಯ ಜನಪ್ರಿಯ ಸಾಹಿತಿ ಹಾಗೂ ಹೆರೊಲ್ಪಿಯುಸ್ ಎಂದೇ ಚಿರಪರಿಚಿತರಾಗಿದ್ದ ಗ್ರೇಶನ್ ಪಿಯುಸ್ ಡಿಸಿಲ್ವಾ ತಮ್ಮ 67ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. * ಗ್ರೇಶನ್ ಪಿಯುಸ್ ಡಿಸಿಲ್ವಾರವರು 1954ರಲ್ಲಿ ಮಂಗಳೂರಿನ ಕೊರ್ಡೆಲ್ನಲ್ಲಿ ಜನಿಸಿದ್ದರು ಅವರ 10 ಕಾದಂಬರಿ, 170 ಸಣ್ಣ ಕಥೆ, 200ರಷ್ಟು ಕವಿತೆಗಳನ್ನು ರಚಿಸಿದ್ದಾರೆ. 300 ರಷ್ಟು ಲೇಖನ ಮತ್ತು 1200 ಹಾಸ್ಯ ಲೇಖನಗಳನ್ನು ಬರೆದಿದ್ದಾರೆ. * ಅವರ ಸಾಹಿತ್ಯ ಸೇವೆಗಾಗಿ ಗೋವಾ ಭಾಷಾ ಮಂಡಲ, ದಾಯ್ಜಿ ದುಬೈ, ಕೊಂಕಣಿ ಕುಟಮ್ ಬಹರೈನ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ. * ಕೊಂಕಣಿಯಲ್ಲಿ 40 ವರ್ಷಗಳ ಸುದೀರ್ಘ ಸಾಹಿತ್ಯ ಸೇವೆಯನ್ನು ಅವರು ಸಲ್ಲಿಸಿದ್ದಾರೆ, ಈ ಮೊದಲು ಕೇಂದ್ರೀಯ ಗುಪ್ತಚರ ದಳದಲ್ಲಿ ಉದ್ಯೋಗಕ್ಕೆ ಸೇರಿಕೊಂಡರು ಹಾಗೂ ಇವರು ಕರ್ತವ್ಯ ನಿಮಿತ್ತ ದಿಲ್ಲಿ, ಮಧ್ಯ ಪ್ರದೇಶ, ಗುಜರಾತ್, ಸಿಕ್ಕಿಂ, ಕರ್ನಾಟಕ, ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಕೇಂದ್ರೀಯ ಗುಪ್ತಚರ ದಳದಲ್ಲಿ ಕೆಲಸ ನಿರ್ವಹಿಸಿದ್ದಾರೆ. * ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ವಿಭಾಗದ ಅಧಿಕಾರಿಯಾಗಿ ಸೇವೆಸಲ್ಲಿಸಿದ್ದಾರೆ.