Job Description: * ಭಾರತ - ಫ್ರಾನ್ಸ್ ದೇಶಗಳು ಅರೇಬಿಯನ್ ಸಮುದ್ರ ಹಾಗೂ ಹಿಂದೂ ಮಹಾಸಾಗರದಲ್ಲಿ, ಫ್ರಾನ್ಸ್ನ ಚಾರ್ಲ್ಸ್ ಡೆ ಗುಲ್ಲೆ ವಿಮಾನ ವಾಹಕ ದಾಳಿ ಪಡೆ ಹಾಗೂ ಐಎನ್ಎಸ್ ವಿಕ್ರಮಾದಿತ್ಯ ಜಂಟಿಯಾಗಿ ಸಮರಾಭ್ಯಾಸವನ್ನು ಎಪ್ರಿಲ್ನಲ್ಲಿ ನಡೆಸಲು ನಿರ್ಧರಿಸಿವೆ ಇದರಿಂದ ಎರಡು ದೇಶಗಳ ರಕ್ಷಣಾ ಸಹಕಾರ ಮತ್ತಷ್ಟು ಉತ್ತಮಗೊಳ್ಳಲಿದೆ. * ಇತ್ತೀಚಿಗೆ ಹೊಸದಾಗಿ ನೇಮಕಗೊಂಡ ಕಮಾಂಡರ್ ರೇರ್ ಅಡ್ಮಿರಲ್ ಅಜಯ್ ಕೊಚ್ಚಾರ್ ನೇತೃತ್ವದ ತಂಡ ಫ್ರಾನ್ಸ್ ಕಾರ್ಯಪಡೆ ಜತೆ ವಿನೂತನ ಕಾರ್ಯಾಚರಣೆ ನಡೆಸಲಿದೆ ಎಂದು ಈ ಜಂಟಿ ಸಮರಾಭ್ಯಾಸದ ಮಾಹಿತಿಯನ್ನು ಭಾರತೀಯ ನೌಕಾಪಡೆ ಅಧಿಕಾರಿ ತಿಳಿಸಿದ್ದಾರೆ. * ಈ ಜಂಟಿ ಸಮರಾಭ್ಯಾಸದಲ್ಲಿ ಚಾರ್ಲ್ಸ್ ಡೆ ಗುಲ್ಲೆ 42,500 ಟನ್ ವಿಮಾನ ವಾಹಕವಾಗಿದೆ ಹಾಗೂ ರಫೇಲ್ ಎಂ ಫೈಟರ್ ವಿಮಾನವನ್ನು ಒಳಗೊಂಡಿದೆ ಜೊತೆಗೆ ಐಎನ್ಎಸ್ ವಿಕ್ರಮಾದಿತ್ಯ ಸಾಂಪ್ರದಾಯಿಕ ವಿಮಾನ ವಾಹಕವಾಗಿದೆ 44,500 ಟನ್ ಎಂಐಜಿ-29 ಕೆ ವಿಮಾನವನ್ನು ಒಳಗೊಂಡು ಸಮರಾಭ್ಯಾಸ ನಡೆಸಲಿವೆ ಎಂದು ತಿಳಿದುಬಂದಿದೆ.