Job Description: * ಶ್ರೀಲಂಕಾದ ಕ್ರಿಕೆಟ್ ಆಟಗಾರ ಉಪುಲ್ ತರಂಗ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು, ಈ ಶ್ರೀಲಂಕಾದ ಕ್ರಿಕೆಟ್ ತಂಡದ ಆಟಗಾರ ಎಡಗೈ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಕೂಡ ಆಗಿ ಮಿಂಚಿದರು. * ಶ್ರೀಲಂಕಾದ ಉಪುಲ್ ತರಂಗ ರವರು ಭಾರತ ಪ್ರವಾಸದ ವೇಳೆ ಅಂದರೆ 2005ರ ಅಹ್ಮದಾಬಾದ್ನಲ್ಲಿ ಟೆಸ್ಟ್ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. * ಪ್ರಸ್ತುತ ಇವರು 31 ಟೆಸ್ಟ್ಗಳನ್ನು ಆಡಿ 1,754 ರನ್ ಗಳಿಸಿದ ಸಾಧನೆ ಮಾಡಿದ್ದಾರೆ, ಹಾಗೂ 3 ಶತಕ ಹಾಗೂ 8 ಅರ್ಧ ಶತಕಗಳ ಸಾಧನೆ ಮಾಡಿದ್ದಾರೆ. * ಉಪುಲ್ ತರಂಗ ರವರು 2017ರಲ್ಲಿ ಭಾರತದ ವಿರುದ್ಧವೇ ಕೊನೆಯ ಟೆಸ್ಟ್ ಆಡಿದ್ದರು. * ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳುವ ಸಮಯ ಇದಾಗಿದೆ ಎಂದು ಉಪುಲ್ ತರಂಗ ರವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.