Job Description: * ಭಾರತದಲ್ಲಿ ಹೂಡಿಕೆ ಮಾಡಲು ಚೀನಾ ದೇಶದ ಯಾವುದೇ ಕಂಪನಿಗಳಿಗೆ ಅನುಮತಿಯನ್ನು ನೀಡಿಲ್ಲ ಪ್ರಸ್ತುತ ಇದುವರೆಗೂ ಯಾವ ಅಂತಹ ಪ್ರಸ್ತಾವಗಳಿಗೂ ಒಪ್ಪಿಗೆ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ಮಾಹಿತಿ ಬಂದಿದೆ. * ಇತ್ತೀಚಿಗೆ ಚೀನಾ ಮತ್ತು ಭಾರತದ ದೇಶಗಳ ಗಡಿಯಲ್ಲಿನ ಉದ್ವಿಗ್ನತೆ ಕಡಿಮೆಯಾಗುತ್ತಿದ್ದಂತೆಯೇ ಚೀನಾದಿಂದ ಹೂಡಿಕೆ ಪ್ರಸ್ತಾಪಗಳು ಹರಿದುಬರುತ್ತಿವೆ ಆದರೆ ಆ ವರದಿಗಳನ್ನು ನಿರಾಕರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. * ಪ್ರಸ್ತುತ ಹಾಂಕಾಂಗ್ ಮೂಲದ ಮೂರು ಕಂಪನಿಗಳ ಪ್ರಸ್ತಾಪವನ್ನು ಜನೇವರಿ 22ರಂದು ನಡೆದ ಸಭೆಯಲ್ಲಿ ಅಂಗೀಕರಿಸಲಾಗಿದೆ. ಹಾಂಕಾಂಗ್ ಮೂಲದ 3ಕಂಪನಿಗಳು: * ಸಿಟಿಜನ್ ವಾಚಸ್, ನಿಪ್ಪಾನ್ ಪೈಂಟ್ಸ್, ನೆಟ್ಪ್ಲೇಗಳಿಂದ ಪ್ರಸ್ತಾಪ ಬಂದಿತ್ತು ಇವುಗಳಲ್ಲಿ ಎರಡು ಜಪಾನಿ ಕಂಪೆನಿ ಮತ್ತು ಒಂದು ಎನ್ಆರ್ಐ ಕಂಪನಿ ಯಾಗಿವೆ ಎಂದು ಮೂಲಗಳು ತಿಳಿಸಿವೆ. * ಸರ್ಕಾರವು ದೃಢವಾದ ಎಫ್ಡಿಐ ನೀತಿಯನ್ನು ಜಾರಿಗೊಳಿಸಿದೆ. FDI ಎಂದರೇನು ? FDI (ಒಂದು ಕಂಪನಿಯು ಮತ್ತೊಂದು ದೇಶದಲ್ಲಿನ ವ್ಯಾಪಾರ ಘಟಕದಲ್ಲಿ ಮಾಲೀಕತ್ವವನ್ನು ನಿಯಂತ್ರಿಸುವಾಗ ವಿದೇಶಿ ನೇರ ಹೂಡಿಕೆ) ಸಾಮಾನ್ಯವಾಗಿ, ಹೂಡಿಕೆದಾರರು ವಿದೇಶಿ ವ್ಯವಹಾರ ಕಾರ್ಯಾಚರಣೆಗಳನ್ನು ಸ್ಥಾಪಿಸಿದಾಗ ಅಥವಾ ವಿದೇಶಿ ವ್ಯವಹಾರ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಾಗ ಎಫ್ಡಿಐ ನಡೆಯುತ್ತದೆ, ಇದರಲ್ಲಿ ಮಾಲೀಕತ್ವವನ್ನು ಸ್ಥಾಪಿಸುವುದು ಅಥವಾ ವಿದೇಶಿ ಕಂಪನಿಯಲ್ಲಿ ಆಸಕ್ತಿಯನ್ನು ನಿಯಂತ್ರಿಸುವುದು.