Job Description: * ಈ ಬಾರಿಯ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತವೇ ವಹಿಸಲಿದೆ, ಹಾಗೂ ಈ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಭಾಗವಹಿಸಲಿವೆ. ಈ 5 ಸದಸ್ಯ ರಾಷ್ಟ್ರಗಳು ಆರ್ಥಿಕ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಭಾರತದೊಂದಿಗೆ ಪ್ರಬಲ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ಚೀನಾ ಹೇಳಿಕೆಯನ್ನು ನೀಡಿದೆ, ಅಲ್ಲದೆ ಈ ಬಾರಿ ಭಾರತ ಬ್ರಿಕ್ಸ್ ಶೃಂಗಸಭೆ ಆಯೋಜಿಸುವುದಕ್ಕೆ ಚೀನಾ ವಿದೇಶಾಂಗ ವ್ಯವಹಾರಗಳ ವಕ್ತಾರ ವಾಂಗ್ ವೆನ್ ಬಿನ್'ರವರು ಬೆಂಬಲವನ್ನು ಸೂಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಕೇಂದ್ರ ಸಚಿವ ಎಸ್ ಜೈಶಂಕರ್ ಹಾಗೂ ಬ್ರಿಕ್ಸ್ ಸಚಿವಾಲಯ ಬ್ರಿಕ್ಸ್ 2021 ವೆಬ್ ಸೈಟ್ ಫೆಬ್ರುವರಿ 19 ರಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಅನಾವರಣಮಾಡಲಾಯಿತು. * ವಿಶ್ವದ ಪ್ರಮುಖ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಪ್ರಬಲ ಗುಂಪಿನ ಬ್ರಿಕ್ಸ್ ಒಂದು ಸಂಕ್ಷಿಪ್ತ ರೂಪವಾಗಿದೆ, ಶಾಂತಿ, ಭದ್ರತೆ, ಅಭಿವೃದ್ಧಿ ಮತ್ತು ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಬ್ರಿಕ್ಸ್ ಕಾರ್ಯವಿಧಾನ ಹೊಂದಿದೆ.