Job Description: * ಉತ್ತರ ಪ್ರದೇಶ ಸರ್ಕಾರವು 5.50 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಲಾಯಿತು ಪ್ರಸ್ತುತ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣಕ್ಕಾಗಿ 101 ಕೋಟಿ ರೂ. ಮೀಸಲಿಡಲಾಗಿದೆ ಹಾಗೂ ಇದನ್ನು ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾರ್ಪಡಿಸಲಾಗುವದು ಅದರ ಜೊತೆಗೆ ಜೆವರ್ ವಿಮಾನ ನಿಲ್ದಾಣದಲ್ಲಿ ರನ್ವೇಗಳನ್ನು ಹೆಚ್ಚಿಸಲು ಸುಮಾರು 2,000 ಕೋಟಿ ನೀಡಲಾಗುವದು ಎಂದು ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಬಜೆಟ್ನಲ್ಲಿ ಹೇಳಿದರು. * ಸದ್ಯ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಕಾರ್ಯ ಮುಕ್ತಾಯಗೊಂಡನಂತರ ವಿಮಾನ ನಿಲ್ದಾಣಕ್ಕೆ 'ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ವಿಮಾನ ನಿಲ್ದಾಣ' ಎಂಬುದಾಗಿ ನಾಮಕರಣ ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿಯನ್ನು ನೀಡಿತು.