Job Description: * ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕರ್ನಾಟಕ ರಾಜ್ಯ ಹೈಕೋರ್ಟ್'ಗೆ ನೂತನವಾಗಿ 4 ಜನ ನ್ಯಾಯಮೂರ್ತಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಮಾಹಿತಿಯನ್ನು ನೀಡಿದೆ, ಈ ಹಿಂದೆ ಸೆಪ್ಟೆಂಬರ್ 2019 ರಲ್ಲಿ ಈ 4 ನ್ಯಾಯಮೂರ್ತಿಗಳನ್ನು ರಾಜ್ಯ ಹೈಕೋರ್ಟ್'ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿತ್ತು. ನೂತನವಾಗಿ ನೇಮಕಗೊಂಡ ನ್ಯಾಯಮೂರ್ತಿಗಳ ಹೆಸರುಗಳು: - ನ್ಯಾಯಮೂರ್ತಿ ಸಿಂಗಪುರಂ ರಾಘವಾಚಾರ್ ಕೃಷ್ಣಕುಮಾರ್, ನ್ಯಾಯಮೂರ್ತಿ ಅಶೋಕ್ ಸುಭಾಷ್ ಚಂದ್ರ ಕಿಣಗಿ, ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್, ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್. ಈ 4 ನ್ಯಾಯಮೂರ್ತಿಗಳು ರಾಜ್ಯ ಹೈಕೋರ್ಟ್'ಗೆ ನೂತನವಾಗಿ ನೇಮಕ ಗೊಂಡಿದ್ದಾರೆ.