Job Description: * ಫೆಬ್ರವರಿ.21 ರಂದು ವಿಶ್ವ ಮಾತೃ ಭಾಷಾ ದಿನಾಚರಣೆಯನ್ನು ಆಚರಿಸಲಾಗುತ್ತದೆ, ಎಲ್ಲಾ ಭಾಷಾ ಸಂಸ್ಕೃತಿಯ ಬಹು ಭಾಷಾವಾದವನ್ನು, ಸಬಲೀಕರಣದತ್ತ ಸಾಗಿಸಲು ವಿಶ್ವ ಮಾತೃ ಭಾಷಾ ದಿನವನ್ನು ಆಚರಿಸಲಾಗುತ್ತಿದೆ. * ಪ್ರಸ್ತುತ ಈ ಜಗತ್ತಿನಲ್ಲಿ ಸರಿ ಸುಮಾರು 7ಸಾವಿರ ಭಾಷೆಗಳಿವೆ, ಆದರೆ ಇಂದಿನ ದಿನಗಳಲ್ಲಿ ಎಷ್ಟೋ ಭಾಷೆಗಳು ಬಳಕೆ ಇಲ್ಲದಿರುವದರಿಂದ ಕೆಲ ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ತಿಳಿದು ಬಂದಿದೆ. ವಿಶ್ವ ಮಾತೃ ಭಾಷಾ ದಿನಾಚರಣೆ: * ಪ್ರತಿ ವರ್ಷ ಫೆಬ್ರವರಿ 21 ರಂದು ಜಗತ್ತಿನತುಂಬೆಲ್ಲ ವಿಶ್ವ ಮಾತೃ ಭಾಷೆ ದಿನವನ್ನು ಆಚರಣೆ ಮಾಡಲಾಗುತ್ತದೆ. * ವಿಶ್ವ ಮಾತೃ ಭಾಷೆ ದಿನವನ್ನು ಮೊದಲ ಬಾರಿಗೆ 1999ರಲ್ಲಿ ಯುನೆಸ್ಕೋ ಘೋಷಿಸಿತು. * 2000ನೇ ವರ್ಷ ದಿಂದ ಪ್ರತಿ ವರ್ಷ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಣೆ ಮಾಡಲಾಗುತ್ತದೆ. * ವಿಶ್ವಸಂಸ್ಥೆಯು 2008 ನ್ನು ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿತು. * 1952 ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡಿದರು, ಈ ಪ್ರತಿಭಟನೆಯಲ್ಲಿ ಢಾಕಾ ವಿಶ್ವವಿದ್ಯಾನಿಲಯದ ಹಲವು ವಿದ್ಯಾರ್ಥಿಗಳು ಮೃತಪಟ್ಟರು ಆದ್ದರಿಂದ ವಿಶ್ವಸಂಸ್ಥೆಯ ಯುನೆಸ್ಕೊ ಫೆಬ್ರವರಿ.21 ನ್ನು ವಿಶ್ವ ಮಾತೃ ಭಾಷೆ ದಿನವಾಗಿ ಆಚರಿಸಲು ಘೋಷಣೆ ಮಾಡಿತು.