Job Description: * ಆಸ್ಟ್ರೇಲಿಯನ್ ಓಪನ್ ಟೆನಿಸ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಜಪಾನ್ ತಾರೆ ನವೊಮಿ ಒಸಾಕಾ ಹಾಗೂ ಇವರು ಸತತ 2ನೇ ಹಾಗೂ ಒಟ್ಟಾರೆ 4ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. * ಮೆಲ್ಬೋರ್ನ್ ಪಾರ್ಕ್ನ ರಾಡ್ ಲೆವರ್ ಅರೇನಾದ ಹಾರ್ಡ್ಕೋರ್ಟ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಜಪಾನ್ ತಾರೆ ನವೊಮಿ ಒಸಾಕಾ ರವರು ಅಮೆರಿಕದ ಜೆನ್ನಿಫರ್ ಬ್ರಾಡಿ ವಿರುದ್ಧ ಜಯ ಗಳಿಸಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. * 23 ವರ್ಷದ ಜಪಾನ್ ತಾರೆ ನವೊಮಿ ಒಸಾಕಾಗೆ ಇದು 2ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯಾಗಿದೆ, ಈ ಮೊದಲು 2019ರಲ್ಲಿ ಪ್ರಥಮ ಬಾರಿ ಚಾಂಪಿಯನ್ ಆಗಿದ್ದರು. * ಯುಎಸ್ ಓಪನ್ನಲ್ಲಿ 2018, 2020 ನವೊಮಿ ಒಸಾಕಾ 2 ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ್ದಾರೆ, ಒಟ್ಟಾರೆ ಇವರು 4ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. * ಮೋನಿಕಾ ಸೆಲೆಸ್ ವೃತ್ತಿಜೀವನದಲ್ಲಿ ಅಂದರೆ 30 ವರ್ಷಗಳ ಹಿಂದೆ 4 ಗ್ರಾಂಡ್ ಸ್ಲಾಂ ಫೈನಲ್ಗಳಲ್ಲೂ ಜಯಸಾದಿಸಿದ್ದರು, ಇದೀಗ ಜಪಾನ್ ತಾರೆ ನವೊಮಿ ಒಸಾಕಾ ಈಗ ಈ ಪಟ್ಟಿಯನ್ನು ಸೇರಿದ್ದಾರೆ. * ಚಾಂಪಿಯನ್ ಜಪಾನ್ ತಾರೆ ನವೊಮಿ ಒಸಾಕಾ15.70 ಕೋಟಿ ರೂ. ಬಹುಮಾನ ಪಡೆದುಕೊಂಡಿದ್ದಾರೆ, ಹಾಗೂ ರನ್ನರ್ಅಪ್ ಬ್ರಾಡಿ 8.56 ಕೋಟಿ ರೂ. ಪಡೆದುಕೊಂಡಿದ್ದಾರೆ.