Job Description: * ಭಾರತದ ಸರ್ಕಾರದಿಂದ ದೇಶಿ ಸಂದೇಶ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದೆ. ಇದನ್ನು ಭಾರತ ಸರ್ಕಾರದಿಂದ ತ್ವರಿತ ಸಂದೇಶ ಸೇವಾ ಕಿರು ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಬಿಡುಗಡೆ ಮಾಡಿದೆ. * ಈ ಅಪ್ಲಿಕೇಶನ್ ವಾಟ್ಸಾಪ್ ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತದೆ, ಇದರಿಂದ ಸರ್ಕಾರಿ ಅಧಿಕಾರಿಗಳಿಗೆ ವಾಟ್ಸಾಪ್ ರೀತಿಯ ಸಂಪರ್ಕದ ಕಿರು ತಂತ್ರಾಂಶದ ಮಾಹಿತಿಯನ್ನು ಇದು ಒದಗಿಸುತ್ತದೆ. * ಭಾರತದ ಸರ್ಕಾರದಿಂದ ದೇಶಿ ಸಂದೇಶ್ ಕಿರು ಅಪ್ಲಿಕೇಶನ್ ಸರ್ಕಾರಿ ಅಧಿಕಾರಿಗಳಲ್ಲದೇ ಸಾಮಾನ್ಯ ಜನರು ಬಳಕೆಗೆ ಅನುಮತಿಯನ್ನು ನೀಡಿದೆ, ಇದನ್ನು ಮೊಬೈಲ್ ಸಂಖ್ಯೆ ಅಥವಾ ಸರ್ಕಾರಿ ಇ-ಮೆಲ್ ಬಳಸಿಕೊಂಡು ಸಂದೇಶ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಬಳಸಬಹುದಾಗಿದೆ. * ಈ ಅಪ್ಲಿಕೇಶನ್'ನಿಂದಾಗಿ ಚಿತ್ರಗಳು ಮತ್ತು ದಾಖಲೆಗಳನ್ನೂ ಹಾಗೂ ಇನ್ನಿತರ ಮಾಹಿತಿಗಳನ್ನು ರವಾನಿಸಲು ಉಪಯೋಗವಾಗಲಿದೆ ಎಂದು ತಿಳಿಸಲಾಗಿದೆ. * ಈ ಅಪ್ಲಿಕೇಶನ್'ನಿಂದ ಬಳಕೆದಾರರ ಖಾಸಗಿತನದ ಹಿತಾಸಕ್ತಿ ಕಾಪಾಡಲು ಅಗತ್ಯ ವಿರುವ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. * ಭಾರತ ಸರ್ಕಾರವು ಸಂದೇಶ್ ಅಪ್ಲಿಕೇಶನ್ ಜೊತೆಗೇನೆ ಮತ್ತೊಂದು ಕಿರು ಅಪ್ಲಿಕೇಶನ್ 'ಸಂವಾದ್' ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.