Job Description: ಕ್ಯಾನ್ಬೆರಾ: ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ಸಾಮಾಜಿಕ ಮಾಧ್ಯಮಗಳು ಒದಗಿಸುವ ಸುದ್ದಿಗಳಿಗನುಗುಣವಾಗಿ ಆಯಾಯ ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿಸಬೇಕೆಂಬ ಆಸ್ಟ್ರೇಲಿಯ ಸರಕಾರದ ನಿಯಮಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿರುವ ಫೇಸ್ಬುಕ್ ಸಂಸ್ಥೆಯು ಆಸ್ಟ್ರೇಲಿಯಾದಲ್ಲಿ ಸುದ್ದಿಗಳ ವೀಕ್ಷಣೆ ಮತ್ತು ಹಂಚಿಕೆ ಮಾಡುವುದಕ್ಕೆ ಫೇಸ್ಬುಕ್ ನಿರ್ಬಂಧ ವಿಧಿಸಿರುವುದಾಗಿ ತಿಳಿಸಿದೆ. * ಇನ್ನು ಗೂಗಲ್ ಸಂಸ್ಥೆಯೂ ಈ ನಿರ್ಧಾರವನ್ನು ವಿರೋಧಿಸಿದ್ದು, ಆಸ್ಟ್ಟೇಲಿಯಾದಲ್ಲಿ ಈ ಕಾನೂನು ಜಾರಿಗೊಳಿಸಲು ಮುಂದಾದರೆ ಸರ್ಚ್ ಎಂಜಿನ್ಗಳನ್ನು ತೆಗೆದುಹಾಕಬೇಕಾಗುತ್ತದೆ ಬೆದರಿಕೆ ಹಾಕಿದೆ.