Job Description: * ಮಲೇಷ್ಯಾದಿಂದ ಮ್ಯಾನ್ಮಾರ್ನ 1200 ಮಂದಿ ವಲಸಿಗರನ್ನು ಗಡಿಪಾರು ಮಾಡಲು ಆದೇಶ ನೀಡಲಾಗಿದೆ ಎಂದು ಮಲೇಷ್ಯಾದ ವಲಸೆ ಮುಖ್ಯಸ್ಥ ಖೈರುಲ್ ಝೈಮಿ ದೌಡ ರವರು ಮಾಹಿತಿಯನ್ನು ನೀಡಿದ್ದಾರೆ. ವಲಸಿಗರನ್ನು ಗಡಿಪಾರು ಮಾಡಲು ಕಾರಣ: * ಮ್ಯಾನ್ಮಾರ್ನ 1200 ಜನ ವಲಸಿಗರನ್ನು ಸೂಕ್ತ ಪ್ರಯಾಣದ ದಾಖಲಾತಿಗಳ ಕೊರತೆ, ಸಾಮಾಜಿಕ ಭೇಟಿಗಾಗಿ ನೀಡಿದ್ದ ಅನುಮತಿಯನ್ನು ಉಲ್ಲಂಘಿಸಿ, ದೀರ್ಘಕಾಲ ಮಲೇಷ್ಯಾ ದೇಶದಲ್ಲಿ ಉಳಿದುಕೊಂಡ ಹೀಗೆ ಹಲವು ಅಪರಾಧಗಳಿಗಾಗಿ ಮ್ಯಾನ್ಮಾರ್ನ ವಲಸಿಗರನ್ನು ಬಂಧಿಸಲಾಗಿದೆ ಎಂದು ಮಲೇಷ್ಯಾ ತಿಳಿಸಿತ್ತು. * ಇದೆ ಫೆಬ್ರವರಿ 23 ರಂದು ಮ್ಯಾನ್ಮಾರ್ ನೌಕಾಪಡೆಯ ಹಡಗುಗಳಲ್ಲಿ ಮ್ಯಾನ್ಮಾರ್ನ 1200 ಜನ ಬಂಧಿತ ವಲಸಿಗರನ್ನು ಗಡಿಪಾರು ಮಾಡಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ.