Job Description: * ದೆಹಲಿ ಸರ್ಕಾರದಿಂದ ಮಂಗಳಮುಖಿಯರಿಗೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ, ಮತ್ತು ಮಹಾನಗರ ಪಾಲಿಕೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಆಯಾ ಕಚೇರಿಗಳಲ್ಲಿ ಪ್ರತ್ಯೇಕ ಶೌಚಾಲಯಗಳನ್ನೂ ನಿರ್ಮಾಣ ಮಾಡಲು ಆದೇಶ ಸೂಚಿಸಿದೆ. ಒಂದು ವೇಳೆ ಮಂಗಳಮುಖಿಯರಿಗೆ ತಕ್ಷಣವೇ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗದಿದ್ದರೆ, ಅಂಗವಿಕಲರಿಗೆ ಲಭ್ಯವಿರುವ ಶೌಚಾಲಯಗಳನ್ನು ಬಳಕೆಗಾಗಿ ನೀಡಬೇಕೆಂದು ತಿಳಿಸಲಾಗಿದೆ. * ಮಂಗಳಮುಖಿ ಹಕ್ಕುಗಳ ಸಂರಕ್ಷಣೆ ಕಾಯ್ದೆ 2019 ರ ಸೆಕ್ಷನ್ 22 ರ ನಿಬಂಧನೆಗಳಿಗೆ ಅನುಸಾರವಾಗಿ ಮಂಗಳಮುಖಿಯರಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನೂ ನಿರ್ಮಾಣ ಮಾಡಲು ದೆಹಲಿ ಸರ್ಕಾರ ತಿಳಿಸಿದೆ.