Job Description: ದೇಶಿ ನಿರ್ಮಿತ ಅರ್ಜುನ್ ಸಮರ ಟ್ಯಾಂಕ್ ಭಾರತೀಯ ಸೇನೆಗೆ ಸೇರ್ಪಡೆ * ಪ್ರಧಾನಿ ನರೇಂದ್ರ ಮೋದಿ ಅವರು ದೇಶಿಯವಾಗಿ ನಿರ್ಮಿಸಿದ ಯುದ್ಧ ವಿಮಾನ ಅರ್ಜನ್ ಟ್ಯಾಂಕ್ -ಮಾರ್ಕ್ 1ಎ ಅನ್ನು ಚೆನ್ನೈಯಲ್ಲಿ ಭಾರತೀಯ ಸೇನಾ ವರಿಷ್ಠ ಎಂ.ಎಂ. ನರವಾಣೆ ಅವರ ಮೂಲಕ ಭಾರತೀಯ ಸೇನೆಗೆ ಹಸ್ತಾಂತರಿಸಿದರು. ಅರ್ಜನ್ ಟ್ಯಾಂಕ್ -ಮಾರ್ಕ್ 1ಎ ಮಾಹಿತಿ: * ಅತ್ಯಾಧುನಿಕ ಅರ್ಜನ್ ಟ್ಯಾಂಕ್'ಅನ್ನು ಚೆನ್ನೈಯಲ್ಲಿರುವ DRDOನ ಸಮರ ವಾಹನಗಳ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ದೇಶೀಯವಾಗಿ ನಿರ್ಮಿಸಿದೆ. * ಭಾರತೀಯ ರಕ್ಷಣಾ ಸಚಿವಾಲಯವು ದೇಶೀ ನಿರ್ಮಿತ ಅರ್ಜನ್ ಟ್ಯಾಂಕ್'ಅನ್ನು ಸರಿ ಸುಮಾರು 8,400 ಕೋಟಿ ರೂ. ವೆಚ್ಚದಲ್ಲಿ 118 ಅರ್ಜುನ್ ಮಾರ್ಕ್ 1ಎ ಟ್ಯಾಂಕ್ಗಳನ್ನು ಭಾರತೀಯ ಸೇನೆಗೆ ನಿಯೋಜಿಸಲು ಅನುಮೋದನೆ ನೀಡಿದೆ.