Job Description: * ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ (NCRB) ವರದಿಯ ಪ್ರಕಾರ ಪ್ರಸ್ತುತ 2017 ರಿಂದ 2019ರಲ್ಲಿ ಭಾರತದ ದೇಶದಲ್ಲಿ ಡ್ರಗ್ ಓವರ್ಡೋಸ್ (ಅಧಿಕ ಮಾದಕದ್ರವ್ಯ ಸೇವನೆಯಿಂದಾಗಿ) 2,300ಕ್ಕೂ ಹೆಚ್ಚು ಜನರು ಸಾವನ್ನಪಿದ್ದಾರೆ ಎಂದು ವರದಿಯನ್ನು ನೀಡಿದೆ. * ಭಾರತದ ದೇಶದಲ್ಲಿ ಡ್ರಗ್ ಓವರ್ಡೋಸ್'ನಿಂದ ಮೃತಪಟ್ಟವರು - 2017ರಲ್ಲಿ 745 ಜನರು, - 2018ರಲ್ಲಿ 875 ಜನರು, - 2019ರಲ್ಲಿ 704 ಜನರು ಸಾವನ್ನಪಿದ್ದಾರೆ. ಅತಿಯಾಗಿ ಡ್ರಗ್ಸ್ ಸೇವನೆಯಿಂದ ಸಾವು ದಾಖಲಾಗಿರುವ ರಾಜ್ಯಗಳು - ಮೊದಲ ಸ್ಥಾನ ರಾಜಸ್ಥಾನ, 338 ಜನರ ಸಾವು - ಎರಡನೇ ಸ್ಥಾನ ಕರ್ನಾಟಕ, 238 ಜನರ ಸಾವು - ಮೂರನೇ ಸ್ಥಾನ ಉತ್ತರಪ್ರದೇಶ, 236 ಜನರ ಸಾವು * ಕೇಂದ್ರ ಸರ್ಕಾರವು ಡ್ರಗ್ಸ್ ಸೇವನೆಯನ್ನು ನಿಯಂತ್ರಿಸಲು 272 ಜಿಲ್ಲೆಗಳಲ್ಲಿ 'ನಶಾಮುಕ್ತಿ ಭಾರತ್ ಅಭಿಯಾನ' ಯೋಜನೆಯನ್ನು ಆರಂಭಿಸಲಾಗಿದೆ ಎಂದು ಮಾದಕವಸ್ತು ನಿಯಂತ್ರಣ ದಳ ತಿಳಿಸಿದೆ, ಈ ಯೋಜನೆಯು ಡ್ರಗ್ಸ್ ಸೇವನೆಯ ಕಾರ್ಯಾಚರಣೆ ಸಹಾಯವಾಗಲಿದೆ ಎಂದು ತಿಳಿಸಲಾಗಿದೆ.