Job Description: * ಪಾಕಿಸ್ತಾನವು ನೆಲದಿಂದ ನೆಲಕ್ಕೆ ದಾಳಿ ಮಾಡಬಲ್ಲ ಬಾಬರ್ ಕ್ರೂಸ್ ಕ್ಷಿಪಣಿಯನ್ನು ಅರೇಬಿಯನ್ ಸಮುದ್ರದಲ್ಲಿ ಯಶಸ್ವಿಯಾಗಿ ಉಡಾವಣೆ ನಡೆಸಿದೆ ಎಂದು ಪಾಕಿಸ್ತಾನ ಸೇನೆ ಮಾಹಿತಿಯನ್ನು ನೀಡಿದೆ. ಕ್ಷಿಪಣಿಯ ವಿಶೇಷತೆ : * ಈ ಬಾಬರ್-1 ಎ ಕ್ಷಿಪಣಿ 280 ಮೈಲಿಗಳು ಅಂದರೆ ಸರಿ ಸುಮಾರು 450 ಕಿ.ಮೀ ವ್ಯಾಪ್ತಿಯೊಂದಿಗೆ, ಭೂಮಿ ಮತ್ತು ಸಮುದ್ರದಲ್ಲಿನ ಗುರಿಗಳನ್ನು ನಿಖರವಾಗಿ ತಲಪಲು ಈ ಕ್ಷಿಪಣಿ ಸಮರ್ಥವಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. * ನ್ಯಾಷನಲ್ ಎಂಜಿನಿಯರಿಮಗ್ ಆಯಂಡ್ ಸೈನ್ಸ್ ಕಮಿಷನ್ನ ಮುಖ್ಯಸ್ಥ ರಾಜಾ ಸಮರ್'ರವರು ಈ ಕ್ಷಿಪಣಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಮರ್ಥ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.