Job Description: * ಭಾರತದ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಹಲವರು ನಾಮನಿರ್ದೇಶನಗೊಂಡಿದ್ದಾರೆ, ಈ ಪ್ರಶಸ್ತಿ ವಿಜೇತರನ್ನು ಅಂತರರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದು ಘೋಷಣೆ ಮಾಡಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ನಾಮನಿರ್ದೇಶನಗೊಂಡವರ ವಿವರ: * ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಹಾಗೂ ಚೆಸ್ ತಾರೆ ಕೊನೇರು ಹಂಪಿ ಮತ್ತು ಯುವ ಶೂಟಿಂಗ್ ತಾರೆ ಮನು ಭಾಕರ್'ರವರು BBC ಆಯ್ಕೆ ಮಾಡುವ ಭಾರತದ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. * ಕುಸ್ತಿ ಪಟು ವಿನೇಶಾ ಪೋಗಟ್ ಹಾಗೂ ದ್ಯುತಿ ಚಾಂದ್ ಕೂಡ ಈ ಪ್ರಶಸ್ತಿ ಪಡೆಯುವ ಸ್ಪರ್ಧೆಯಲ್ಲಿದ್ದಾರೆ. ಪ್ರಶಸ್ತಿ ನೀಡುವ ವಿಧಾನ: * ಭಾರತದ ವರ್ಷದ ಮಹಿಳಾ ಕ್ರೀಡಾಪಟು' ಪ್ರಶಸ್ತಿಯನ್ನು ಪಡೆಯಲು ನಾಮನಿರ್ದೇಶನಗೊಂಡಿರುವ ಕ್ರೀಡಾಪಟುಗಳನ್ನು ವೋಟಿಂಗ್ ಮಾಡುವ ಮೂಲಕ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತದೆ, ಪ್ರಸ್ತುತ ಈ ಕ್ರೀಡಾಪಟು ಅಭಿಮಾನಿಗಳಿಗೆ ಫೆಬ್ರುವರಿ 24ರವರೆಗೆ ವೋಟಿಂಗ್ ಮಾಡಲು ಅವಕಾಶ ನೀಡಲಾಗಿದೆ. * ಬಿಬಿಸಿಯು ಈ ಸಾರಿ ಹೊಸ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದ್ದು, ಅದುವೇ 'ವರ್ಷದ ಉದಯೋನ್ಮುಖ ಕ್ರೀಡಾಪಟು' ಎಂಬ ಪ್ರಶಸ್ತಿ, ಇದನ್ನು ಬಿಬಿಸಿಯು ನೀಡುತ್ತದೆ ಈ ಪ್ರಶಸ್ತಿ ಆಯ್ಕೆಗೆ ಯಾವುದೇ ರೀತಿಯ ವೋಟಿಂಗ್ ಇರುವುದಿಲ್ಲ ಎಂದು ಬಿಬಿಸಿ ತಿಳಿಸಿದೆ, ಅದರ ಬದಲಾಗಿ ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ.