Job Description: * ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ವಿಶ್ವ ವಾಣಿಜ್ಯ ಸಂಸ್ಥೆಯ ನೂತನ ಮಹಾ ನಿರ್ದೇಶಕರಾಗಿ ಆಫ್ರಿಕನ್ ಮೂಲದ ಮಹಿಳೆ ನೈಜೀರಿಯಾದ 'ಎನ್ ಗೋಜಿ ಒಕೊಂಜೊ ಇವೇಲಾ' ಇವರನ್ನು ಆಯ್ಕೆಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. * ಈ ಆಫ್ರಿಕನ್ ಮೂಲದ ಮಹಿಳೆ ಆಯ್ಕೆಯಾದರೆ ಮುಂದಿನ ನಾಲ್ಕು ವರ್ಷದ ಅವಧಿಗೆ ವಿಶ್ವ ಆರ್ಥಿಕ ವೇದಿಕೆಯ (WTO) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. * ಈ ಮೊದಲು ಇವರು ವಿಶ್ವಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ, ಹಾಗೂ WTO ಸಾಮಾನ್ಯ ಮಂಡಳಿಯ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದಾರೆ. * ಪ್ರಸ್ತುತ ಅಮೆರಿಕ ಹಾಗೂ WTO ನ 164 ಸದಸ್ಯ ರಾಷ್ಟ್ರಗಳು ಆಫ್ರಿಕನ್ ಮೂಲದ ಮಹಿಳೆ ಆಯ್ಕೆಗೆ ಒಪ್ಪಿಗೆಯನ್ನು ನೀಡಿದ್ದು, ಈ ಎಲ್ಲ ರಾಷ್ಟ್ರಗಳ ಅನುಮತಿಯ ಮೇರೆಗೆ ನೈಜೀರಿಯಾದ ಮಾಜಿ ಹಣಕಾಸು ಸಚಿವೆಯನ್ನು ಈ ಹುದ್ದೆಗೆ ಆಯ್ಕೆ ಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ.